ಕೋವಿಡ್ ಎರಡನೇ ಅಲೆಯ ಭೀತಿ ಕರಗಿ ಜನಜೀವನ ಸಹಜತೆಯತ್ತ ಬರುತ್ತಿರುವಂತೆಯೇ ದೂರದ ಬ್ರಿಟನ್ ನಲ್ಲಿ ಒಂದೇ ದಿನದಲ್ಲಿ 44,985 ಮಂದಿ ಸೋಂಕಿಗೆ ಪಾಸಿಟಿವ್ ಆಗಿ ಕಂಡು ಬಂದಿದ್ದಾರೆ. ಈ ಮೂಲಕ ಆ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯು 87,34,934 ತಲುಪಿದೆ.
ಅಮೆರಿಕದಲ್ಲಿ ಕೋವಿಡ್‌ನಿಂದ ಮೃತಪಟ್ಟ ಮಂದಿಯ ಸಂಖ್ಯೆಯಲ್ಲಿ 135ರಷ್ಟು ಏರಿಕೆಯಾಗಿ ಒಟ್ಟಾರೆ 1,39,461 ಮಂದಿ ಮೃತಪಟ್ಟಿದ್ದಾರೆ. ಈ ಅಂಕಿಸಂಖ್ಯೆಗಳು ಕಳೆದ 28 ದಿನಗಳದ್ದಾಗಿವೆ ಎಂದು ಶಿನುವಾ ನ್ಯೂಸ್ ವರದಿ ಮಾಡಿದೆ. ಆಸ್ಪತ್ರೆಗಳಲ್ಲಿಯೇ 8,238 ಮಂದಿ ಸೋಂಕಿನಿಂದ ದಾಖಲಾಗಿದ್ದಾರೆ.
ಈ 5 – 10 ರೂ. ನಾಣ್ಯ ನಿಮ್ಮಬಳಿ ಇದ್ದರೆ ನಿಮಗೆ ಬಂಪರ್…!
ಈ ಸೋಂಕಿನಿಂದ ಮನುಕುಲವನ್ನು ರಕ್ಷಿಸಲು ಲಸಿಕೆಯೊಂದೇ ಸಾಲದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಕೊಡುತ್ತಿರುವ ನಡುವೆಯೇ ಈ ಬೆಳವಣಿಗೆ ಘಟಿಸಿದೆ.
ಇದೇ ವೇಳೆ, ಭಾರತದಲ್ಲಿ ಒಂದೇ ದಿನದಲ್ಲಿ 16,326 ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆಯು 34,15,956 ತಲುಪಿದೆ ಎಂದು ಶನಿವಾರ ಬೆಳಿಗ್ಗೆ 8 ಗಂಟೆಗೆ ಸಿಕ್ಕ ಮಾಹಿತಿಯಿಂದ ತಿಳಿದು ಬಂದಿದೆ.
ʼತಲೆಹೊಟ್ಟುʼ ಸಮಸ್ಯೆಯೇ….? ಇಲ್ಲಿದೆ ಪರಿಹಾರ….!
ಇದೇ ವೇಳೆ, ಮೃತಪಟ್ಟವರ ಸಂಖ್ಯೆಯು 4,52,708 ತಲುಪಿದ್ದು, ಸರಾಸರಿ 666 ಮಂದಿ ಪ್ರತಿನಿತ್ಯ ಮೃತಪಟ್ಟಿದ್ದಾರೆ. ಕಳೆದ 233 ದಿನಗಳಲ್ಲಿಯೇ ಸೋಂಕಿನ ಸಕ್ರಿಯ ಪ್ರಕರಣಗಳು ಅತ್ಯಂತ ಕನಿಷ್ಠ ಮೊತ್ತವಾದ 1,73,738ಕ್ಕೆ ಇಳಿದಿದೆ.