alex Certify ಕೊರೋನಾ ಆತಂಕದಲ್ಲಿದ್ದ ದೇಶದ ಜನತೆಗೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಆತಂಕದಲ್ಲಿದ್ದ ದೇಶದ ಜನತೆಗೆ ಗುಡ್ ನ್ಯೂಸ್

ನವದೆಹಲಿ: ದೇಶದಲ್ಲಿ ಒಮಿಕ್ರಾನ್ ಬಳಿಕ ಕೊರೋನಾ ಮೂರನೇ ಅಲೆ ಆತಂಕ ಹೆಚ್ಚಾಗಿದೆ. ಕೊರೋನಾ ಸೋಂಕು ಶರವೇಗದಲ್ಲಿ ಹರಡುತ್ತಿದೆ. ಇದೇ ಹೊತ್ತಲ್ಲಿ ಮೂರನೇ ಅಲೆ ಅಬ್ಬರದ ನಡುವೆ ಆಶಾಕಿರಣವೊಂದು ಮೂಡಿದೆ. ಕೊರೊನಾ ಸೋಂಕಿನ ಆರ್ -ವ್ಯಾಲ್ಯೂ ಇಳಿಮುಖವಾಗುತ್ತಿದೆ ಎಂದು ಹೇಳಲಾಗಿದೆ.

ದೇಶದಲ್ಲಿ ಆರ್ -ವ್ಯಾಲ್ಯೂ ದರ 2.2 ಕ್ಕೆ ಇಳಿಕೆ ಕಂಡಿದೆ. ಎರಡು ಲಕ್ಷಕ್ಕೂ ಅಧಿಕ ದೈನಂದಿನ ಪ್ರಕರಣಗಳ ನಡುವೆಯೂ ಸೋಂಕಿನ ವೇಗ ಕಡಿಮೆಯಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಕೊರೋನಾ ಸೋಂಕಿನ ವೇಗವನ್ನು ಸೂಚಿಸುವ ಆರ್ -ವ್ಯಾಲ್ಯೂ ಜನವರಿ 7 ರಿಂದ 13ರ ನಡುವೆ ಇಳಿಕೆ ಕಂಡಿದೆ. ಒಮಿಕ್ರಾನ್ ಸೋಂಕಿನ ಪ್ರಕರಣಗಳ ಸಂಖ್ಯೆ ಕೂಡ ಇಳಿಮುಖವಾಗಿದ್ದು, ಇದು ಸೋಂಕಿನ ಇಳಿಕೆ ಬಗ್ಗೆ ಸುಳಿವು ನೀಡಿದೆ. ನಿರ್ದಿಷ್ಟ ಪ್ರದೇಶದಲ್ಲಿ ಕೋವಿಡ್ ಎಷ್ಟು ವೇಗವಾಗಿ ಹರಡುತ್ತಿದೆ. ಒಬ್ಬರಿಂದ ಎಷ್ಟು ಮಂದಿಗೆ ಸೋಂಕು ತಗಲುತ್ತದೆ ಎಂಬುದನ್ನು ಆರ್- ವ್ಯಾಲ್ಯೂ ಸೂಚಿಸುತ್ತದೆ. ಇದು ದೇಶದಲ್ಲಿ ಕಡಿಮೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...