alex Certify ನ್ಯುಮೋನಿಯಾ ಶುರುವಾಗಿದೆಯೋ ಎಂದು ಪತ್ತೆ ಮಾಡೋದು ಹೇಗೆ..? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನ್ಯುಮೋನಿಯಾ ಶುರುವಾಗಿದೆಯೋ ಎಂದು ಪತ್ತೆ ಮಾಡೋದು ಹೇಗೆ..? ಇಲ್ಲಿದೆ ಮಾಹಿತಿ

ಕೋವಿಡ್​ 19ನಿಂದ ಬಳಲುತ್ತಿರುವ ಅನೇಕರಲ್ಲಿ ನ್ಯುಮೋನಿಯಾ ಕಾಯಿಲೆ ಕೂಡ ಕಾಣಿಸಿಕೊಳ್ತಿದೆ. ಕೋವಿಡ್​ ನ್ಯುಮೋನಿಯಾ ಶ್ವಾಸಕೋಶದ ಮೇಲೆ ಸಂಪೂರ್ಣವಾಗಿ ದಾಳಿ ಮಾಡೋದ್ರಿಂದ ಸಾವು ಸಂಭವಿಸುವ ಸಾಧ್ಯತೆ ತುಂಬಾನೇ ಹೆಚ್ಚು.

ಹೀಗಾಗಿ ನ್ಯುಮೋನಿಯಾದಿಂದ ಬಳಲುತ್ತಿರುವ ಕೋವಿಡ್ ರೋಗಿಗಳಿಗೆ ಸೋಂಕು ತಗುಲಿದ ಮೊದಲ ನಾಲ್ಕು ದಿನಗಳು ತುಂಬಾನೇ ನಿರ್ಣಾಯಕ. ಈ ಸಮಯದಲ್ಲೇ ನೀವು ನ್ಯುಮೋನಿಯಾ ಪತ್ತೆ ಮಾಡಿದಲ್ಲಿ ವ್ಯಕ್ತಿ ಬದುಕುವ ಸಾಧ್ಯತೆ ಹೆಚ್ಚು. ಹಾಗಿದ್ದಲ್ಲಿ ಮನೆಯಲ್ಲೇ ನಿಮಗೆ ನ್ಯುಮೋನಿಯಾ ಇದೆ ಅನ್ನೋದನ್ನ ಕಂಡುಕೊಳ್ಳೋದು ಹೇಗೆ ಅನ್ನೋದಕ್ಕೆ ಇಲ್ಲಿದೆ ಮಾಹಿತಿ :

ಭಾರತೀಯ ವೈದ್ಯಕೀಯ ಸಂಘದ ಕಾರ್ಡಿಯೋಲಾಜಿಸ್ಟ್​ ಹಾಗೂ ಜಂಟಿ ಕಾರ್ಯದರ್ಶಿ ಡಾ. ಸಂತೋಷ್​ ಗುಪ್ತಾ ನ್ಯುಮೋನಿಯಾ ಪರೀಕ್ಷೆಯನ್ನ ಮನೆಯಲ್ಲೇ ಮಾಡುವ ಬಗ್ಗೆ ಹಂತವನ್ನ ವಿವರಿಸಿದ್ದಾರೆ :

ಎರಡು ಖುರ್ಚಿಗಳನ್ನ 40 ರಿಂದ 50 ಅಡಿ ಅಂತರದಲ್ಲಿ ಇರಿಸಿ.

ನಿಮ್ಮ ಆಕ್ಸಿಜನ್​ ಮಟ್ಟವನ್ನ ಪರೀಕ್ಷೆ ಮಾಡಿ.

ಈಗ ಈ ಎರಡು ಖುರ್ಚಿಗಳ ನಡುವೆ ವೇಗವಾಗಿ ನಡೆದಾಡಿ.

ಆರು ನಿಮಿಷಗಳ ಬಳಿಕ ನಿಮ್ಮ ಆಮ್ಲಜನಕ ಮಟ್ಟವನ್ನ ಇನ್ನೊಮ್ಮೆ ಪರೀಕ್ಷೆ ಮಾಡಿ.

ಆರು ನಿಮಿಷಗಳ ಅಂತರದಲ್ಲಿ ನಿಮ್ಮ ಆಕ್ಸಿಜನ್​ ಮಟ್ಟ 4 ಪರ್ಸೆಂಟ್​ ಕಡಿಮೆಯಾಗಿದೆ ಅಂದರೆ ನಿಮಗೆ ಕೋವಿಡ್ ನ್ಯೂಮೋನಿಯಾ ತಗುಲಿರುವ ಸಾಧ್ಯತೆ ಇದೆ.

ನ್ಯುಮೋನಿಯಾ ಪತ್ತೆ ಹೇಗೆ..?

ಕೋವಿಡ್​ 19 ಲಕ್ಷಣಗಳು ಕಾಣಿಸಿಕೊಂಡು 4 ರಿಂದ 5 ದಿನಗಳ ಬಳಿಕ ನಿಮ್ಮ ನಾಡಿ ಮಿಡಿತ 100ಕ್ಕಿಂತ ಹೆಚ್ಚಿದ್ದು, ಜ್ವರ 101 ಫ್ಯಾರನ್​ ಹೀಟ್​ಗಿಂತ ಕಡಿಮೆ ಇದ್ದು, ಆಮ್ಲಜನಕ ಮಟ್ಟ 94ಕ್ಕಿಂತ ಕಡಿಮೆ ಹಾಗೂ ಸಿಆರ್​ಪಿ 10ಕ್ಕಿಂತ ಹೆಚ್ಚಿದ್ದು ನೀವು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ನೀವು ನ್ಯೂಮೋನಿಯಾ ಸಮಸ್ಯೆಯನ್ನ ಹೊಂದಿದ್ದೀರಾ ಎಂದರ್ಥ. ಈ ರೀತಿ ಲಕ್ಷಣಗಳು ಕಂಡು ಬಂದಲ್ಲಿ ನೀವು ಕೂಡಲೇ ಆಸ್ಪತ್ರೆಗೆ ದಾಖಲಾಗೋದು ಒಳ್ಳೆಯದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...