
ಆಕ್ಲೆಂಡ್: ಕೊರೋನಾ ಸೋಂಕಿನಿಂದ ಮುಕ್ತವಾಗಿರುವ ನ್ಯೂಜಿಲೆಂಡ್ ನಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಗಿದೆ.
ಆಕ್ಲೆಂಡ್ ಸ್ಕೈ ಟವರ್ ನಿಂದ ಆಕರ್ಷಕ ಸಿಡಿಮದ್ದು ಪ್ರದರ್ಶನದೊಂದಿಗೆ ನೂತನ ವರ್ಷವನ್ನು ಜನ ಸಂಭ್ರಮದಿಂದ ಸ್ವಾಗತಿಸಿದ್ದಾರೆ. ನಂತರ ಆಸ್ಟ್ರೇಲಿಯಾದಲ್ಲಿ ಕೊರೋನಾ ನಿರ್ಬಂಧಗಳು ಇಲ್ಲದೆ ನೂತನ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು.
ಭಾರತ, ಅಮೆರಿಕ, ಯುರೋಪ್, ಮಧ್ಯಪ್ರಾಚ್ಯ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಹೊಸ ವರ್ಷದ ಆಚರಣೆಗೆ ನಿರ್ಬಂಧ ವಿಧಿಸಲಾಗಿದೆ. ಕೊರೊನಾ ನಿರ್ಮೂಲನೆಗೆ ವಿಶ್ವ ಹೋರಾಟ ನಡೆಸುತ್ತಿದೆ. ರೂಪಾಂತರ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಹೀಗಿದ್ದರೂ, ನ್ಯೂಜಿಲೆಂಡ್ ಕೊರೋನಾದಿಂದ ಮುಕ್ತವಾಗಿ ಹೊಸ ವರ್ಷ ಸ್ವಾಗತಿಸಿದ್ದು, ಜನರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.