ಕಳೆದ ಐದು ತಿಂಗಳ ಅವಧಿಯಲ್ಲಿ, ದಿನವೊಂದರಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಕೇಸುಗಳ ಏರಿಕೆಯನ್ನು ಶನಿವಾರ ದೆಹಲಿ ಕಂಡಿದೆ. ಪರೀಕ್ಷಾ ಪಾಸಿಟಿವಿಟಿ ದರ (ಟಿಪಿಆರ್) ರಾಷ್ಟ್ರ ರಾಜಧಾನಿಯಲ್ಲಿ 0.13 ಪ್ರತಿಶತ ಇದೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಅಧಿಕೃತ ಬುಲೆಟಿನ್ ತಿಳಿಸಿದೆ.
ದೆಹಲಿಯಲ್ಲಿ ಕಂಡು ಬಂದ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ 14,42,090 ತಲುಪಿದೆ. 14.16 ಲಕ್ಷಕ್ಕೂ ಹೆಚ್ಚಿನ ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಗುರುವಾರ 85 ಹೊಸ ಪ್ರಕರಣಗಳು ದಾಖಲಾಗಿದ್ದು, ಪಾಸಿಟಿವಿಟಿ ದರವು 0.15 ಪ್ರತಿಶತ ಇತ್ತು. ಶುಕ್ರವಾರ 69 ಹೊಸ ಪ್ರಕರಣಗಳು ದಾಖಲಾಗಿವೆ.
BIG BREAKING: ಒಮಿಕ್ರಾನ್ ಆತಂಕದ ನಡುವೆ ಒಂದೇ ದಿನ 7,081 ಜನರಲ್ಲಿ ಕೋವಿಡ್ ಪಾಸಿಟಿವ್; ದೇಶದಲ್ಲಿದೆ 83,913 ಕೋವಿಡ್ ಸಕ್ರಿಯ ಪ್ರಕರಣ
ಕೋವಿಡ್ ಸೋಂಕಿನಿಂದ ದೆಹಲಿಯಲ್ಲಿ ಮೃತಪಟ್ಟವರ ಸಂಖ್ಯೆ 25,100 ತಲುಪಿದೆ.