ನವದೆಹಲಿ: ಭಾರತ ಮತ್ತು ಬ್ರಿಟನ್ ನಲ್ಲಿ ವ್ಯಾಪಕವಾಗಿ ಕಂಡು ಬಂದ ರೂಪಾಂತರಿ ವೈರಸ್ ವಿರುದ್ಧ ದೇಶಿಯ ಲಸಿಕೆ ಕೊವ್ಯಾಕ್ಸಿನ್ ಪರಿಣಾಮಕಾರಿಯಾಗಿದೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ.
ಬ್ರಿಟನ್ ಮತ್ತು ಭಾರತದಲ್ಲಿ ಮೊದಲು ಗುರುತಿಸಲಾದ ರೂಪಾಂತರ ತಳಿಯ ವೈರಸ್ ಗಳನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನು ಕೊವ್ಯಾಕ್ಸಿನ್ ಹೊಂದಿದೆ. ರಾಷ್ಟ್ರೀಯ ವೈರಾಣು ಸಂಸ್ಥೆ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ಜಂಟಿಯಾಗಿ ಅಧ್ಯಯನ ಕೈಗೊಂಡಿದ್ದು, ಅಧ್ಯಯನದ ವರದಿಯ ಅಂಶಗಳನ್ನು ಭಾರತ್ ಬಯೋಟೆಕ್ ಉಲ್ಲೇಖಿಸಿ ಲಸಿಕೆ ಪರಿಣಾಮಕಾರಿಯಾಗಿದೆ ಎಂದು ಮಾಹಿತಿ ನೀಡಿದೆ.
ಭಾರತ್ ಬಯೋಟೆಕ್ ಸಹ-ಸಂಸ್ಥಾಪಕ ಮತ್ತು ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಸುಚಿತ್ರಾ ಎಲ್ಲಾ ಟ್ವೀಟ್ ಮಾಡಿದ್ದು, ಹೊಸ ರೂಪಾಂತರ ತಳಿಯ ವಿರುದ್ಧ ಕೊವ್ಯಾಕ್ಸಿನ್ ರಕ್ಷಣೆ ನೀಡುತ್ತದೆ ಎನ್ನುವುದು ವೈಜ್ಞಾನಿಕ ಸಂಶೋಧನೆಯಿಂದ ಗೊತ್ತಾಗಿದೆ ಎಂದು ಹೇಳಿದ್ದಾರೆ.