ಕೋವಿಡ್-19 ಲಸಿಕೆಯನ್ನು ಮನೆ ಮನೆ ಬಾಗಿಲಿಗೆ ತಲುಪಿಸುವ ಕೆಲಸಕ್ಕೆ ಕೈ ಹಾಕಿರುವ ರಾಜಸ್ಥಾನದ ಬಿಕನೇರ್ ಇಂಥ ಅನುಕರಣೀಯ ಅಭಿಯಾನಕ್ಕೆ ಮುಂದಾದ ದೇಶದ ಮೊದಲ ನಗರವಾಗಿದೆ.
ಜೂನ್ 15ರಿಂದ ಮನೆ ಮನೆ ಬಾಗಿಲಿಗೆ ತೆರಳಲಿರುವ ಆರೋಗ್ಯ ಸೇವಾ ಸಿಬ್ಬಂದಿ 45 ವರ್ಷ ಮೇಲ್ಪಟ್ಟ ಮಂದಿಗೆ ಆದ್ಯತೆ ಮೇರೆಗೆ ಲಸಿಕೆ ಹಾಕಲಿದ್ದಾರೆ. ಅರ್ಹರು ತಮ್ಮ ಹೆಸರುಗಳನ್ನು ಲಸಿಕಾ ಕಾರ್ಯಕ್ರಮಕ್ಕೆ ನೋಂದಣಿ ಮಾಡಲು ಸಹಾಯವಾಣಿ ಸಂಖ್ಯೆಯನ್ನೂ ರಾಜಸ್ಥಾನ ಸರ್ಕಾರ ಆರಂಭಿಸಿದೆ. ವಾಟ್ಸಾಪ್ ಸಂಖ್ಯೆ ಮೂಲಕ ಅರ್ಹರು ತಮ್ಮ ಹೆಸರುಗಳು ಹಾಗೂ ವಿಳಾಸಗಳನ್ನು ತಲುಪಿಸಬೇಕಿದೆ.
ಫುಡ್ ಕಾಂಬಿನೇಷನ್ ಬಗ್ಗೆ ಇರಲಿ ಎಚ್ಚರ…..!
ಸಹಾಯವಾಣಿ ಮೂಲಕ ನೋಂದಣಿ ಮಾಡಿಸಿಕೊಂಡವರ ಪ್ರದೇಶದಲ್ಲಿ ಕನಿಷ್ಠ 10 ಮಂದಿ ಅರ್ಹರು ಇದ್ದರೆ, ಈ ಸೇವೆಯನ್ನು ಪಡೆಯಬಹುದಾಗಿದೆ.
ಜನಜಂಗುಳಿ ಇರುವ ಜಾಗಗಳಲ್ಲಿ ಜನರಿಗೆ ಲಸಿಕೆ ನೀಡುವ ಕೆಲಸವನ್ನು ಸುಲಭವಾಗಿಸಲು ’ಗಾಲಿಗಳ ಮೇಲೆ ಲಸಿಕೆ’ ಕಾರ್ಯಕ್ರಮಕ್ಕೆ ಬಿಕನೇರ್ ಜಿಲ್ಲಾಡಳಿತ ಚಾಲನೆ ಕೊಟ್ಟಿದೆ.
ರಾಜಸ್ಥಾನದಲ್ಲಿ ಇದುವರೆಗೂ 33.15 ಲಕ್ಷ ಮಂದಿಗೆ ಕೋವಿಡ್ ಲಸಿಕೆಗೆ ಮೊದಲ ಡೋಸ್ ಕೊಡಲಾಗಿದ್ದು, 1,109 ಮಂದಿಗೆ ಎರಡನೇ ಡೋಸ್ ಕೊಡಲಾಗಿದೆ.