ನಿಧಾನ ಗತಿಯಲ್ಲಿ ಕೊರೊನಾ ಸೋಂಕು ಕರ್ನಾಟಕದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇಸ್ಕಾನ್ ದೇಗುಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.
ಮಂದಿರದ ಆವರಣವನ್ನು ಕೂಡ ಆ. 29 ಮತ್ತು ಆ. 30ರಂದು ಮುಚ್ಚಲಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
‘ಕೃಷ್ಣ ಜನ್ಮಾಷ್ಟಮಿ’ಯಂದು ರಾಶಿಗನುಗುಣವಾಗಿ ಮಾಡಿ ಈ ಕೆಲಸ
ಸಾರ್ವಜನಿಕರ ಸುರಕ್ಷತೆ ಕಾರಣದಿಂದಾಗಿ ಸದ್ಯ ಜಾರಿಯಲ್ಲಿರುವ ಸರಕಾರದ ಮಾರ್ಗಸೂಚಿಗಳನ್ನು ಗೌರವಿಸಿ, ಪಾಲಿಸಲು ಇಸ್ಕಾನ್ ಆಡಳಿತ ಮಂಡಳಿ ನಿರ್ಧರಿಸಿದೆ. ಇದರಿಂದಾಗುವ ಅನನುಕೂಲತೆಗಾಗಿ ವಿಷಾದಿಸುತ್ತೇವೆ ಎಂದು ಮಂಡಳಿ ಹೇಳಿದೆ.
ಆದರೆ, ಜನ್ಮಾಷ್ಟಮಿ ಪ್ರಯುಕ್ತ ಶ್ರೀಕೃಷ್ಣನಿಗೆ ಸಲ್ಲಬೇಕಿರುವ ಎಲ್ಲ ಸೇವೆಗಳನ್ನು ಪೂರ್ಣರೂಪದಲ್ಲಿ ಸಲ್ಲಿಸಲಾಗುವುದು ಎಂದು ಕೂಡ ಇಸ್ಕಾನ್ ತಿಳಿಸಿದೆ. ಇಸ್ಕಾನ್ ಯೂಟ್ಯೂಬ್ ಚಾನಲ್ ಮೂಲಕ ಭಕ್ತರು ದೇವರ ಸೇವೆಯ ದರ್ಶನವನ್ನು ಪಡೆಯಲು ಅನುಕೂಲ ಕಲ್ಪಿಸಲಾಗಿದೆ.