ಕೋವಿಡ್ ಇಷ್ಟರವರೆಗೆ ಬಾಧಿಸಿದ್ದು ಸಾಲದೆಂಬಂತೆ ರೂಪಾಂತರಿಯಾಗಿ ಮತ್ತೆ ಕಾಡುವ ಸುಳಿವು ನೀಡಿದೆ.
ನಾವೆಲ್ ಕೊರೋನಾ ವೈರಸ್ ಕುರಿತಂತೆ ಮಾಧ್ಯಮಗಳಲ್ಲಿ ಭಯ ಮೂಡಿಸುವ ವರದಿಗಳು ದಿನೇ ದಿನೇ ಕಡಿಮೆಯಾಗುತ್ತಿರುವಂತೆಯೇ ಇದೀಗ ಯೂರೋಪ್ ಮತ್ತು ಏಷ್ಯಾದ ಅನೇಕ ದೇಶಗಳಲ್ಲಿ ಕೋವಿಡ್‌ನ ಹೊಸ ಅಲೆಯ ಅಬ್ಬರ ಶುರುವಾಗಿದೆ.
ಎವೈ.4.2 ಅಥವಾ ’ಡೆಲ್ಟಾ ಪ್ಲಸ್’ ಎಂದು ಕರೆಯಲಾಗುವ ಈ ವೈರಾಣು ಕೋವಿಡ್‌ನ ಹೊಸ ಅವತಾರಿಯಾಗಿದೆ.
ಡೆಲ್ಟಾ ವೈರಾಣು ಇನ್ನೂ ಸಹ ಪ್ರಭಾವಿಯಾಗಿರುವಾಗಲೇ ಇದರ ಉಪ ವೈರಾಣು ಎವೈ.4.2 ಡೆಲ್ಟಾ ಅದಾಗಲೇ ವ್ಯಾಪಕವಾಗಿ ಹಬ್ಬುತ್ತಿದೆ. ಇದರಲ್ಲಿ ಸ್ಪೈಕ್ ಮ್ಯಟೇಷನ್‌ಗಳಾದ ಎ222ವಿ ಹಾಗೂ ವೈ145ಎಚ್‌ಗಳು ಇದ್ದು, ವೈರಾಣುವನ್ನು ಜೀವಂತವಿಡುತ್ತವೆ.
ಎವೈ.4.2 ವೈರಾಣು ಇನ್ನಷ್ಟು ಹೆಚ್ಚಿನ ಅಪಾಯಕಾರಿಯಾಗಿದ್ದು, ಇದು ಡೆಲ್ಟಾಗಿಂತಲೂ ಹೆಚ್ಚಿನ ಮಟ್ಟದಲ್ಲಿ ಪಸರುತ್ತದೆಯೇ ಎಂದು ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಆದರೆ ಈ ವೈರಾಣು ಆಲ್ಫಾ ಹಾಗೂ ಡೆಲ್ಟಾವತಾರಿಗಳಷ್ಟು ದೊಡ್ಡ ಬೆದರಿಕೆಯನ್ನಂತೂ ಹುಟ್ಟಿ ಹಾಕಿಲ್ಲ.