ಇನ್ನೇನು ಕೆಲವೇ ತಿಂಗಳಲ್ಲಿ ಎದುರಾಗಲಿರುವ ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಅಪಾಯ ಕಾದಿದೆ ಅಂತಾ ತಜ್ಞರು ಎಚ್ಚರಿಸುತ್ತಲೇ ಇದ್ದಾರೆ.
ಈಗಾಗಲೇ ಸರ್ಕಾರ ಕೂಡ ಕೊರೊನಾ ಮೂರನೇ ಅಲೆಗೆ ಸಾಕಷ್ಟು ತಯಾರಿಗಳನ್ನ ಮಾಡಿಕೊಳ್ತಿದೆ. ಆದರೆ ಈ ಎಲ್ಲದರ ನಡುವೆ ಮಕ್ಕಳ ಕತೆ ಏನಾಗುತ್ತೋ ಎಂಬ ಆತಂಕ ಪೋಷಕರಲ್ಲಿ ಮನೆ ಮಾಡಿದೆ. ಇದಕ್ಕಾಗಿ ನೀವು ಮೊದಲ ಮಾಡಬೇಕಾದ ಕೆಲಸ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚು ಮಾಡುವುದು. ಮಕ್ಕಳಲ್ಲಿ ಇಮ್ಯೂನಿಟಿ ಪವರ್ ಹೆಚ್ಚಿಸುವ ಕೆಲ ಪ್ರಮುಖ ಆಹಾರಗಳ ಪಟ್ಟಿ ಇಲ್ಲಿದೆ ನೋಡಿ :
ಮಕ್ಕಳ ಬೆಳಗ್ಗಿನ ತಿಂಡಿಯಲ್ಲಿ ಹೆಚ್ಚೆಚ್ಚು ಕಾರ್ಬೋಹೈಡ್ರೇಟ್, ಪ್ರೋಟಿನ್ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಒಳ್ಳೆಯ ಕೊಬ್ಬಿನಂಶ ಇರುವಂತೆ ಮಾಡಿದರೆ ಅವರ ದಿನ ಉತ್ತಮವಾಗಿ ಶುರುವಾದಂತೆ. ಹೀಗಾಗಿ ಬೆಳಗ್ಗಿನ ಉಪಹಾರದ ಜೊತೆಯಲ್ಲಿ ಮಕ್ಕಳಿಗೆ ಮೊಟ್ಟೆಯನ್ನ ನೀಡೋದು ಒಳ್ಳೆಯದು.
ಓಟ್ ಮೀಲ್ ಹಾಗೂ ಓಟ್ಸ್ ಮೆದುಳಿನ ಆರೋಗ್ಯಕ್ಕೆ ತುಂಬಾನೇ ಸಹಕಾರಿ. ಅಲ್ಲದೇ ಇದರಲ್ಲಿ ಹೇರಳವಾದ ಫೈಬರ್ ಅಂಶ, ವಿಟಮಿನ್ ಇ, ಬಿ ಹಾಗೂ ಜಿಂಕ್ ಕೂಡ ಇದೆ. ಓಟ್ಸ್ನಿಂದ ತರಹೇವಾರಿ ಖಾದ್ಯಗಳನ್ನ ನೀಡುವ ಮೂಲಕ ಮಕ್ಕಳನ್ನ ಜಂಕ್ ಫುಡ್ಗಳಿಂದ ದೂರವಿಡಿ.
ತರಕಾರಿಗಳಲ್ಲಿ ಇಲ್ಲದ ಪೋಷಕಾಂಶಗಳೇ ಇಲ್ಲ. ಹೀಗಾಗಿ ಮಕ್ಕಳಿಗೆ ಟೊಮ್ಯಾಟೋ, ಗೆಣಸು, ಕುಂಬಳಕಾಯಿ, ಕ್ಯಾರಟ್ ಸೇರಿದಂತೆ ಒಂದಿಲ್ಲೊಂದು ತರಕಾರಿಗಳು ದೇಹದ ಒಳಕ್ಕೆ ಹೋಗುವಂತೆ ಮಾಡಿ.
ಹಾಲು, ಬೆಣ್ಣೆ, ತುಪ್ಪ ಹಾಗು ಮೊಸರಿನಲ್ಲಿ ಪ್ರೋಟಿನ್ ಪ್ರಮಾಣ ಅಗಾಧವಾಗಿದೆ. ಅಲ್ಲದೇ ವಿಟಮಿನ್ ವಿ ಅಂಶ ಕೂಡ ಮೆದುಳಿನ ಆರೋಗ್ಯವನ್ನ ಕಾಪಾಡಬಲ್ಲದು. ಕ್ಯಾಲ್ಶಿಯಂ ಅಂಶದಿಂದ ಮೂಳೆಗಳು ಸದೃಢವಾಗಿರಲಿದೆ. ಹೀಗಾಗಿ ಆದಷ್ಟು ಡೈರಿ ಉತ್ಪನ್ನಗಳನ್ನ ಮಕ್ಕಳಿಗೆ ಸೇವಿಸಲು ನೀಡಿ.