
ನವದೆಹಲಿ: ಕೊವ್ಯಾಕ್ಸಿನ್ ಲಸಿಕೆಯಿಂದ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ದೀರ್ಘಕಾಲದವರೆಗೆ ಈ ಲಸಿಕೆ ಕಾಪಾಡುತ್ತದೆ. 6 ರಿಂದ 12 ತಿಂಗಳ ಕಾಲ ರೋಗನಿರೋಧಕ ಶಕ್ತಿ ಇರುತ್ತದೆ ಎಂದು ಭಾರತ್ ಬಯೋಟೆಕ್ ಸಂಸ್ಥೆ ಹೇಳಿದೆ.
ಒಮ್ಮೆ ಕೊವ್ಯಾಕ್ಸಿನ್ ಲಸಿಕೆ ಪಡೆದುಕೊಂಡರೆ ಕೊರೋನಾ ಬರುವುದಿಲ್ಲ. 6 ರಿಂದ 12 ತಿಂಗಳವರೆಗೆ ಕೊರೋನಾ ಸೋಂಕು ತಗುಲುವುದಿಲ್ಲ ಎಂದು ಭಾರತ ಬಯೋಟೆಕ್ ಸಂಸ್ಥೆಯಿಂದ ಮಾಹಿತಿ ನೀಡಲಾಗಿದೆ. ಪ್ರಯೋಗಗಳ ದತ್ತಾಂಶವನ್ನು ಆಧರಿಸಿ ಸಂಸ್ಥೆ ಈ ಮಾಹಿತಿ ನೀಡಿದೆ.
ಐಸಿಎಂಆರ್ ಮತ್ತು ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆ ಕೊರೋನಾ ತಡೆಯುವಲ್ಲಿ ಪರಿಣಾಮಕಾರಿಯಾಗಿದೆ. ಕೊವ್ಯಾಕ್ಸಿನ್ ಲಸಿಕೆಯಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ದೀರ್ಘಕಾಲದವರೆಗೆ ಕಾಪಾಡುವ ಗುಣ ಹೊಂದಿದೆ ಎಂದು ಹೇಳಲಾಗಿದೆ.