ಭಾರತ್ ಬಯೋಟೆಕ್ ನಿರ್ಮಿತ ಕೊವ್ಯಾಕ್ಸಿನ್ ಲಸಿಕೆಯು ಕೊರೊನಾ ವೈರಸ್ನ ಬೀಟಾ ಹಾಗೂ ಡೆಲ್ಟಾ ರೂಪಾಂತರಿಗಳ ವಿರುದ್ಧವೂ ಸುರಕ್ಷತೆಯನ್ನ ಒದಗಿಸುತ್ತೆ ಎಂದು ಪುಣೆಯ ವೈರಾಣು ರಾಷ್ಟ್ರೀಯ ವಿಶ್ವವಿದ್ಯಾಲಯ, ಭಾರತೀಯ ವೈದ್ಯಕೀಯ ಸಂಘ ಹಾಗೂ ಭಾರತ್ ಬಯೋಟೆಕ್ ಹೇಳಿದೆ.
ಕೊರೊನಾ ವೈರಸ್ನ ಡೆಲ್ಟಾ ರೂಪಾಂತರಿ(B.1.617.2) ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿಯೇ ಕಂಡುಬಂದಿತ್ತು. ಬೀಟಾ ರೂಪಾಂತರಿ(B.1.351) ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿದೆ.
ಕೊವ್ಯಾಕ್ಸಿನ್ ಲಸಿಕೆಯ ಎರಡೂ ಡೋಸ್ಗಳನ್ನ ಪಡೆದು 28 ದಿನಗಳನ್ನ ಕಳೆದ 17 ಮಂದಿ ಹಾಗೂ ಕೊರೊನಾದಿಂದ ಗುಣಮುಖರಾದ 20 ಮಂದಿಯನ್ನ ಈ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಈ ಅಧ್ಯಯನದಲ್ಲಿ ಸ್ವದೇಶಿ ನಿರ್ಮಿತ ಕೊವ್ಯಾಕ್ಸಿನ್ ಲಸಿಕೆಯು ಈ ಎರಡೂ ರೂಪಾಂತರಿಗಳ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ತಿಳಿದುಬಂದಿದೆ.
ಕೊರೊನಾ ಎರಡನೆ ಅಲೆಯಲ್ಲಿ ಅತ್ಯಂತ ವೇಗವಾಗಿ ಸೋಂಕನ್ನ ಹಬ್ಬಿಸಬಲ್ಲ ಡೆಲ್ಟಾ ರೂಪಾಂತರಿ ದೇಶದಲ್ಲಿ ಕಂಡು ಬಂದಿದೆ. ಬ್ರಿಟನ್ನಲ್ಲಿ ಕಂಡು ಬಂದ ಆಲ್ಪಾ ರೂಪಾಂತರಿಗಿಂತ ಇದು ಹೆಚ್ಚಿನ ಪ್ರಮಾಣದಲ್ಲಿ ಸೋಂಕನ್ನ ಹರಡುತ್ತದೆ. ಆದರೆ ಡೆಲ್ಟಾ ರೂಪಾಂತರಿ ವೈರಸ್ನಿಂದಲೇ ಹೆಚ್ಚಿನ ಸಾವು ವರದಿಯಾಗುತ್ತಿದೆಯಾ ಅನ್ನೋದಕ್ಕೆ ಇನ್ನೂ ಸ್ಪಷ್ಟ ಪುರಾವೆ ದೊರಕಿಲ್ಲ.