ಭಾರತ್ ಬಯೋಟೆಕ್ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆಗಳನ್ನು 2 – 18 ವರ್ಷದೊಳಗಿನ ಮಕ್ಕಳಿಗೂ ಬಳಕೆ ಮಾಡಲು ಡಿಸಿಜಿಐ ತುರ್ತು ಅನುಮತಿ ನೀಡಿದೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು 18 ವರ್ಷದ ಒಳಗಿನ ಮಕ್ಕಳಿಗೆ ಲಸಿಕೆ ನೀಡುವ ಸಂಬಂಧ ಫೇಸ್ 1ಹಾಗೂ ಫೇಸ್ 2 ಪ್ರಾಯೋಗಿಕ ಪರೀಕ್ಷೆಗಳನ್ನು ಪೂರ್ಣಗೊಳಿಸಿದೆ.
ಸ್ವದೇಶಿ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆಯು 2 ಡೋಸ್ಗಳಲ್ಲಿ ಮಕ್ಕಳಿಗೆ ನೀಡಲಾಗುತ್ತದೆ. ಹಾಗೂ 2 ಡೋಸ್ಗಳ ನಡುವಿನ ಅಂತರವನ್ನು 20 ದಿನಗಳಿಗೆ ನಿಗದಿ ಮಾಡಲಾಗಿದೆ.