alex Certify ಡೆಲ್ಟಾ ಪ್ಲಸ್ ಗೆ ಪರಿಣಾಮಕಾರಿ ಕೊವ್ಯಾಕ್ಸಿನ್ ಲಸಿಕೆ: ಐಸಿಎಂಆರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೆಲ್ಟಾ ಪ್ಲಸ್ ಗೆ ಪರಿಣಾಮಕಾರಿ ಕೊವ್ಯಾಕ್ಸಿನ್ ಲಸಿಕೆ: ಐಸಿಎಂಆರ್

ಕೊರೊನಾ ವಿರುದ್ಧದ ಹೋರಾಟದಲ್ಲಿ ಲಸಿಕೆ ದೊಡ್ಡ ಅಸ್ತ್ರವಾಗಿದೆ. ವಿಶ್ವದಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಈ ಮಧ್ಯೆ ಡೆಲ್ಟಾ ಪ್ಲಸ್ ಬಗ್ಗೆ ಆತಂಕ ಹೆಚ್ಚಾಗಿದೆ. ಈ ಮಧ್ಯೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ.

ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್, ಕೋವಿಡ್ -19 ರ ಡೆಲ್ಟಾ ರೂಪಾಂತರದ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಅಧ್ಯಯನ ತಿಳಿಸಿದೆ. ಕೊವ್ಯಾಕ್ಸಿನ್ ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದೆ.

ಭಾರತ್ ಬಯೋಟೆಕ್ ಕೊವ್ಯಾಕ್ಸಿನ್, ರೋಗಲಕ್ಷಣದ ಕೋವಿಡ್ -19 ವಿರುದ್ಧ ಶೇಕಡಾ 77.8 ರಷ್ಟು ಪರಿಣಾಮಕಾರಿ ಮತ್ತು ಹೊಸ ಡೆಲ್ಟಾ ರೂಪಾಂತರದ ವಿರುದ್ಧ ಶೇಕಡಾ 65.2 ರಷ್ಟು ಪರಿಣಾಮಕಾರಿ ಎಂದು ಈ ಹಿಂದೆ ಹೇಳಲಾಗಿತ್ತು. ಕೊವ್ಯಾಕ್ಸಿನ್, ತೀವ್ರ ರೋಗಲಕ್ಷಣದ ಕೊರೊನಾ ಪ್ರಕರಣಗಳ ವಿರುದ್ಧ ಶೇಕಡಾ 93.4 ರಷ್ಟು ಪರಿಣಾಮಕಾರಿ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.

ತುರ್ತು ಬಳಕೆಯ ಪಟ್ಟಿಗೆ ಅಗತ್ಯವಿರುವ ಎಲ್ಲ ದಾಖಲೆಗಳನ್ನು, ಭಾರತ್ ಬಯೋಟೆಕ್ ಜುಲೈ 9 ರಿಂದ ಡಬ್ಲ್ಯುಎಚ್‌ಒಗೆ ಸಲ್ಲಿಸಿದೆ. ಏಜೆನ್ಸಿಯ ಪರಿಶೀಲನಾ ಪ್ರಕ್ರಿಯೆ ಆರಂಭವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...