ನಾವೆಲ್ ಕೊರೋನಾ ವೈರಸ್‌ನ ರೂಪಾಂತರಗಳ ವಿರುದ್ಧ ತಾನು ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್ ಬೂಸ್ಟರ್ ಡೋಸ್‌ಗಳ ಪ್ರಯೋಗಗಳು ’ಯಾವುದೇ ಅಡ್ಡಪರಿಣಾಮಗಳಿಲ್ಲದೇ ಸುದೀರ್ಘಾವಧಿ ಸುರಕ್ಷತೆ’ ತೋರುವ ಲಕ್ಷಣಗಳನ್ನು ತೋರುತ್ತಿವೆ ಎಂದು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ತಿಳಿಸಿದೆ.
“ಬೂಸ್ಟರ್ ಶಾಟ್‌ಗಳನ್ನು ತೆಗೆದುಕೊಂಡ ಮಂದಿಯ ಪೈಕಿ 90% ಜನರಲ್ಲಿ ಸೋಂಕಿನ ಹೊಸ ರೂಪಾಂತರಿಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಕಂಡು ಬಂದಿದೆ (ಎರಡನೇ ಡೋಸ್ ಪಡೆದ ಆರು ತಿಂಗಳ ಬಳಿಕ)” ಎಂದು ಕೋವ್ಯಾಕ್ಸಿನ್ ಲಸಿಕೆಯ ಉತ್ಪಾದಕ ತಿಳಿಸಿದೆ.
ಮಕ್ಕಳಿಗೆ ಮಾಡಿ ಕೊಡಿ ‘ಏಪ್ರಿಕಾಟ್ʼ ಕುಕ್ಕಿಸ್
ಅಡ್ಡಪರಿಣಾಮಗಳ ಸಾಧ್ಯತೆಗಳೂ ಸಹ ಇತರೆ ಉತ್ಪಾದಕರ ಉತ್ಪನ್ನಗಳಿಗಿಂತಲೂ ಕಡಿಮೆ ಇರುವುದಾಗಿ ಹೇಳಿಕೊಂಡಿರುವ ಭಾರತ್ ಬಯೋಟೆಕ್, “ಬೂಸ್ಟರ್ ಡೋಸ್‌ನಿಂದ ಸಿಡಿ4 ಮತ್ತು ಸಿಡಿ8 ಪ್ರತಿಕ್ರಿಯೆಗಳನ್ನು ಹೆಚ್ಚಿಸಬಹುದಾಗಿದೆ. ಇದರಿಂದ ಸಾರ್ಸ್-ಕೋವಿ2 ವಿರುದ್ಧ ಕೋವ್ಯಾಕ್ಸಿನ್ ಸುದೀರ್ಘಾವಧಿಗೆ ರಕ್ಷಣೆ ನೀಡಲಿರುವ ಸಾಧ್ಯತೆ ಇದೆ” ಎಂದು ಡ್ರಗ್ ಉತ್ಪಾದಕ ತಿಳಿಸಿದೆ.
ದೇಶದಲ್ಲಿರುವ 15-18 ವರ್ಷ ವಯೋಮಾನದ ಮಂದಿಗೆ ಇತರೆ ಕಂಪನಿಗಳ ಲಸಿಕೆಗಳನ್ನು ನೀಡುತ್ತಿರುವುದು ತನಗೆ ತಿಳಿದುಬಂದಿದ್ದು, ತನ್ನದೇ ಕೋವ್ಯಾಕ್ಸಿನ್‌ನ ಲಸಿಕೆಗಳನ್ನು ಮಾತ್ರ ನೀಡುತ್ತಿರುವುದನ್ನು ಖಾತ್ರಿ ಪಡಿಸುವಂತೆ ಭಾರತ್ ಬಯೋಟೆಕ್ ಆಯೋಗ್ಯ ಕಾರ್ಯಕರ್ತರಲ್ಲಿ ಆಗ್ರಹಿಸಿದೆ. ದೇಶದಲ್ಲಿ ಈ ವಯೋಮಾನದ ಮಂದಿಗೆ ನೀಡಲು ಕೋವ್ಯಾಕ್ಸಿನ್ ಲಸಿಕೆಗಳಿಗೆ ಮಾತ್ರವೇ ಅನುಮತಿ ನೀಡಲಾಗಿದೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ.
ಮೇಲ್ಕಂಡ ವರ್ಗದ ಮಂದಿಗೆ ಲಸಿಕಾಕರಣಕ್ಕೆ ಜನವರಿ 3ರಂದು ಚಾಲನೆ ನೀಡಲಾಗಿದೆ.