alex Certify ʼಕೋವಿಡ್‌ʼ ಹೊಸ ರೂಪಾಂತರಗಳ ವಿರುದ್ಧ ಹೋರಾಡಲು ಕೋವ್ಯಾಕ್ಸಿನ್ ಬೂಸ್ಟರ್‌ ಡೋಸ್ ಪರಿಣಾಮಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೋವಿಡ್‌ʼ ಹೊಸ ರೂಪಾಂತರಗಳ ವಿರುದ್ಧ ಹೋರಾಡಲು ಕೋವ್ಯಾಕ್ಸಿನ್ ಬೂಸ್ಟರ್‌ ಡೋಸ್ ಪರಿಣಾಮಕಾರಿ

ಕೋವಿಡ್-19 ಸಾಂಕ್ರಮಿಕದ ಮುಂದಿನ ಅಲೆಗಳ ಬಗ್ಗೆ ದೇಶವಾಸಿಗಳು ಚಿಂತಿತರಾಗಿರುವ ಹಿನ್ನೆಲೆಯಲ್ಲಿ, ಕೋವಿಡ್ ಲಸಿಕೆಯ ಬೂಸ್ಟರ್‌ ಡೋಸ್ ಮೂಲಕ ವೈರಾಣುವಿನ ಸುಧಾರಿತ ಅವತರಣಿಕೆಗಳ ವಿರುದ್ಧ ರಕ್ಷಣೆ ಪಡೆಯಬಹುದಾಗಿದೆ ಎಂದು ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್‌ಐವಿ) ತಿಳಿಸಿದೆ.

ಟೆಕ್ಕಿ ಪತ್ನಿಯನ್ನು ಹತ್ಯೆ ಮಾಡಲು ಭಯಾನಕ ಸ್ಕೆಚ್‌ ಹಾಕಿದ್ದ ಪತಿ

ಕೋವಿಡ್ ವಿರುದ್ಧ ಬೂಸ್ಟರ್‌ ಡೋಸ್‌ಗಳನ್ನು ಅನೇಕ ದೇಶಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದೇ ರೀತಿ ಭಾರತದಲ್ಲೂ ಸಹ ಅಭಿವೃದ್ಧಿ ಮಾಡಲು ಚಿಂತನೆ ನಡೆದಿವೆ ಎನ್ನುತ್ತಾರೆ ಐಸಿಎಂಆರ್‌-ಎನ್‌ಐವಿ ನಿರ್ದೇಶಕಿ ಪ್ರಿಯಾ ಅಬ್ರಹಮ್.

ಸಾರ್ಸ್-ಕೋವ್‌-2 ವೈರಾಣುವಿನ ವಿವಿಧ ಅವತರಣಿಕೆಗಳ ವಿರುದ್ದ ರಕ್ಷಣೆ ಪಡೆಯಲು ಕೋವಿಡ್ ಲಸಿಕೆಯ ಎರಡು ಶಾಟ್‌ಗಳನ್ನು ಕೊಟ್ಟ ಬಳಿಕ ಆಗಾಗ (ವರ್ಷ ಅಥವಾ ಎರಡು ವರ್ಷಕ್ಕೊಮ್ಮೆ) ಬೂಸ್ಟರ್‌ ಶಾಟ್‌ಗಳನ್ನು ಕೊಡುವ ಮೂಲಕ ಮಂದಿಯ ರೋಗನಿರೋಧಕ ಶಕ್ತಿಯನ್ನು ವರ್ಧನೆ ಮಾಡಬಹುದಾಗಿದೆ.

ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬದಲಾವಣೆಗೆ ಟ್ವಿಸ್ಟ್; ನಲಪಾಡ್ ಗೆ ಬಿಗ್ ಶಾಕ್

“ಹೊಸದಾಗಿ ಹುಟ್ಟಿ ಬರುವ ವೈರಾಣುವಿನ ಅವತರಣಿಕೆಗಳ ವಿರುದ್ಧ ಕೋವ್ಯಾಕ್ಸಿನ್ ಬಹಳ ಪರಿಣಾಮಕಾರಿಯಾಗಬಲ್ಲದು. ಬೂಸ್ಟರ್‌ ಲಸಿಕೆಯಾಗಿ ಕೋವ್ಯಾಕ್ಸಿನ್ ಬಹಳ ಉಪಯುಕ್ತ ಪಾತ್ರ ನಿರ್ವಹಿಸಬಲ್ಲದು. ಏಕೆಂದರೆ ರೋಗನಿರೋಧಕ ಶಕ್ತಿಯ ಜೀವಕೋಶಗಳು ಹಾಗೂ ಆಂಟಿಬಾಡಿಗಳನ್ನು ಕೋವ್ಯಾಕ್ಸಿನ್ ಜೊತೆಗೂಡಿ ವೈರಸ್‌ನ ಇನ್ನಷ್ಟು ಪ್ರೋಟೀನ್‌ಗಳನ್ನು ಗುರುತಿಸಿ ನಾಶಮಾಡಬಲ್ಲದು” ಎಂದು ಅಬ್ರಹಮ್ ತಿಳಿಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...