ಭಾರತ್ ಬಯೋಟೆಕ್‌ನ ಲಸಿಕೆ ಕೋವ್ಯಾಕ್ಸಿನ್ 3 ನೇ ಹಂತದ ಪ್ರಯೋಗದ ಫಲಿತಾಂಶ ಬಹಿರಂಗವಾಗಿದೆ. ಕೊರೊನಾ ವೈರಸ್ ವಿರುದ್ಧ ಕೋವ್ಯಾಕ್ಸಿನ್ ಶೇಕಡಾ 77.8 ರಷ್ಟು ಪರಿಣಾಮಕಾರಿ ಎಂಬುದು ಗೊತ್ತಾಗಿದೆ. ಡಿಸಿಜಿಐನ ವಿಷಯ ತಜ್ಞರ ಸಮಿತಿಯು ಅಂಗೀಕರಿಸಿದ 3 ನೇ ಹಂತದ ಪ್ರಯೋಗ ದತ್ತಾಂಶದ ಪ್ರಕಾರ, ಲಸಿಕೆ ಕೊರೊನಾ ವಿರುದ್ಧ ಶೇಕಡಾ 77.8 ರಷ್ಟು ಪರಿಣಾಮಕಾರಿಯಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಮೂಲಗಳು ತಿಳಿಸಿವೆ.
ವಿಶ್ವ ಆರೋಗ್ಯ ಸಂಸ್ಥೆ, ಕೋವ್ಯಾಕ್ಸಿನ್ ಬಳಕೆ ಪ್ರಸ್ತಾಪವನ್ನು ಒಪ್ಪಿಕೊಂಡಿದೆ ಎಂದು ಕೆಲ ದಿನಗಳ ಹಿಂದೆ ವರದಿಯಾಗಿತ್ತು. ಲಸಿಕೆ ಅನುಮೋದನೆಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವ ಮೊದಲು ಜೂನ್ 23 ರಂದು ಡಬ್ಲ್ಯುಎಚ್‌ಒ ಅಲ್ಲಿ ಸಭೆ ನಡೆಯಲಿದೆ ಎನ್ನಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಈ ಸಭೆಯಲ್ಲಿ ಉತ್ಪನ್ನದ ವಿವರವಾದ ಪರಿಶೀಲನೆ ನಡೆಯುವುದಿಲ್ಲ. ಲಸಿಕೆ ತಯಾರಕರಿಂದ ಲಸಿಕೆಯ ಗುಣಮಟ್ಟದ ಬಗ್ಗೆ ಸಂಕ್ಷಿಪ್ತ ವಿವರಣೆ ಪ್ರಸ್ತುತಪಡಿಸಲು ಅವಕಾಶವಿದೆ.
ಸಭೆಗೆ ಮುಂಚೆಯೆ ಡಿಸಿಜಿಐನ ವಿಷಯ ತಜ್ಞರ ಸಮಿತಿಯಿಂದ, ಲಸಿಕೆ ಶೇಕಡಾ 77.88 ರಷ್ಟು ಪರಿಣಾಮಕಾರಿ ಎಂಬ ವರದಿ ಸಿಕ್ಕಿದೆ. ಜುಲೈ-ಸೆಪ್ಟೆಂಬರ್ ವೇಳೆಗೆ ಲಸಿಕೆಯ ತುರ್ತು ಬಳಕೆಗಾಗಿ ಡಬ್ಲ್ಯುಎಚ್‌ಒನಿಂದ ಅನುಮೋದನೆ ಪಡೆಯುವ ನಿರೀಕ್ಷೆಯಿದೆ ಎಂದು ಭಾರತ್ ಬಯೋಟೆಕ್ ಕಳೆದ ತಿಂಗಳು ಹೇಳಿತ್ತು.