ನವದೆಹಲಿ: ಕೊವ್ಯಾಕ್ಸಿನ್ ಲಸಿಕೆಯ ಮಕ್ಕಳ ಮೇಲಿನ ವೈದ್ಯಕೀಯ ಪ್ರಯೋಗದ ಮೂರನೇ ಹಂತ ಮುಕ್ತಾಯವಾಗಿದೆ. ವೈದ್ಯಕೀಯ ಪ್ರಯೋಗ ಮುಕ್ತಾಯವಾಗಿದ್ದು, ಭಾರತ್ ಬಯೋಟೆಕ್ ಕಂಪನಿ 2 – 17 ವರ್ಷದ ಒಳಗಿನ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ಪ್ರಯೋಗದ ಅಂಕಿ ಅಂಶಗಳನ್ನು ಡಿಜಿಸಿಐಗೆ ಸಲ್ಲಿಕೆ ಮಾಡಲಾಗುವುದು.
ವಿಷಯ ತಜ್ಞರ ಸಮಿತಿಯ ಸಭೆಯಿಂದ ಪರಿಶೀಲನೆ ಬಾಕಿ ಇದೆ. ಸಿ.ಡಿ.ಎಸ್.ಸಿ.ಒ. ವಿಷಯ ತಜ್ಞರ ಸಮಿತಿಯ ಸಭೆ ಪರಿಶೀಲನೆ ಬಳಿಕ ಡಿಜಿಸಿಐಗೆ ಶಿಫಾರಸು ಮಾಡಲಾಗುವುದು. ಲಸಿಕೆ ತುರ್ತು ಬಳಕೆಗೆ ಅನುಮೋದನೆ ನೀಡುವ ಕುರಿತಾಗಿ ಶಿಫಾರಸು ಮಾಡಲಾಗುವುದು ಎನ್ನಲಾಗಿದೆ.
ಮುಂದಿನವಾರ ವಿಶ್ವ ಆರೋಗ್ಯ ಸಂಸ್ಥೆ, ಸ್ವತಂತ್ರ ತಜ್ಞರ ಸಮಿತಿಯ ಸಭೆ ನಡೆಯಲಿದ್ದು, ಕೊವ್ಯಾಕ್ಸಿನ್ ಲಸಿಕೆಯ ರಿಸ್ಕ್ ಅಸೆಸ್ ಮೆಂಟ್ ಬಗ್ಗೆ ಚರ್ಚೆ ನಡೆಸಲಾಗುವುದು. ಬಳಿಕ ತುರ್ತು ಬಳಕೆಗೆ ಅನುಮೋದನೆ ನೀಡಬೇಕೇ? ಬೇಡವೇ? ಎಂಬುದರ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ