ಪ್ರಧಾನ ಮಂತ್ರಿ ನರೇಂದ್ರ ಮೋದಿರನ್ನು ಭೇಟಿ ಮಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇದೇ ವೇಳೆ ಪೆಗಾಸಸ್ ಕಾಂಡದ ಕುರಿತು ಚರ್ಚಿಸಲಾಯಿತೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ.
“ಎರಡು ವರ್ಷಗಳ ಬಳಿಕ ನಾನು ದೆಹಲಿಗೆ ಬಂದಿದ್ದೇನೆ. ನಮ್ಮ ಪಕ್ಷ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಬಂದಿದ್ದೇನೆ. ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡುವ ಅವಕಾಶ ನನ್ನದಾಗಿತ್ತು. ಇದೊಂದು ಸಾಂವಿಧಾನಿಕ ಶಿಷ್ಟಾಚಾರ” ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
“ಕೆಲವೊಮ್ಮೆ ನಾನು ಏನನ್ನು ಚರ್ಚಿಸುತ್ತೇನೆ ಎಂದು ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ” ಎಂದು ಮಮತಾ ತಿಳಿಸಿದ್ದಾರೆ.
ಪೆಗಾಸಸ್ ಕಾಂಡದ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಮಧ್ಯಪ್ರವೇಶವನ್ನು ತಾವು ಇಚ್ಛಿಸುವುದಾಗಿ ಮಮತಾ ಹೇಳಿಕೊಂಡಿದ್ದಾರೆ.