alex Certify ಲಂಚ ಸ್ವೀಕರಿಸಿದ ಗ್ರಾಮ ಲೆಕ್ಕಾಧಿಕಾರಿಗೆ ಶಾಕ್: 3 ವರ್ಷ ಜೈಲು, ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಂಚ ಸ್ವೀಕರಿಸಿದ ಗ್ರಾಮ ಲೆಕ್ಕಾಧಿಕಾರಿಗೆ ಶಾಕ್: 3 ವರ್ಷ ಜೈಲು, ದಂಡ

ಹಾಸನ: ಹಾಸನ ಲೋಕಾಯುಕ್ತ ಪೊಲೀಸ್ ಠಾಣೆ ಮೊ.ನಂ 11/2012 ಕಲಂ 07.13(1)(ಡಿ) ಸಹವಾಚನ ಕಲಂ 13(2) ಕರ್ನಾಟಕ ಭ್ರಷ್ಟಚಾರ ನಿಗ್ರಹ ಕಾಯಿದೆ 1988 ರ ರಡಿ ದಿನಾಂಕ 28-11-2012 ರಂದು ಆರೋಪಿತರಾದ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಗಂಡಸಿ ಹೋಬಳಿ ಯಡವನಹಳ್ಳಿ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಮುರುಳಿಧರ ಎಸ್.ಎಂ.  ರವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣದಲ್ಲಿ ತನಿಖಾಧಿಕಾರಿಗಳು ತನಿಖೆ ಪೂರೈಸಿ ಹಾಸನದ ಘನ ಪ್ರಧಾನ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಲಾಗಿರುತ್ತದೆ.

ನ್ಯಾಯಾಲಯವು ಸ್ಪೆಷಲ್ ಸಿ.ಸಿ. ನಂ 74/2013 ರಡಿ ವಿಚಾರಣೆ ನಡೆಸಿ ದಿನಾಂಕ 22-11-2024 ರಂದು ಈ ಪ್ರಕರಣದ ಆರೋಪಿತ ಮುರುಳಿಧರ ಎಸ್.ಎಂ, @ ಮುರುಳಿಗೆ ಶಿಕ್ಷೆ ವಿಧಿಸಿದೆ. ಲಂಚದ ಹಣದ ಬೇಡಿಕೆಗೆ 3 ವರ್ಷ ಸಾದಾರಣ ಸೆರೆವಾಸ ಹಾಗೂ 25 ಸಾವಿರ ರೂ ದಂಡ, ಈ ದಂಡವನ್ನು ಪಾವತಿಸಲು ತಪ್ಪಿದಲ್ಲಿ ನಾಲ್ಕು ತಿಂಗಳ ಸೆರವಾಸವನ್ನು ಮತ್ತು ಲಂಚ ಸ್ವೀಕಾರ ಸಂಬಂಧ 3 ವರ್ಷ ಸಾದರಣ ಸೆರೆವಾಸ ಹಾಗೂ 25 ಸಾವಿರ ರೂ ದಂಡ, ಈ ದಂಡವನ್ನು ಪಾವತಿಸಲು ತಪ್ಪಿದಲ್ಲಿ ನಾಲ್ಕು ತಿಂಗಳ ಸೆರವಾಸ ಶಿಕ್ಷೆಗೆ ಒಳಗಾಗುವಂತೆ ಈ ಎರಡು ಶಿಕ್ಷೆಗಳು ಏಕಕಾಲದಲ್ಲಿ ಅನುಭವಿಸತಕ್ಕದು ಎಂದು ಅಂತಿಮ ತೀರ್ಪನ್ನು ಹೊರಡಿಸಿರುತ್ತದೆ.

ಈ ಪ್ರಕರಣದಲ್ಲಿ ತನಿಖಾಧಿಕಾರಿಗಳಾಗಿ ಶಾಂತಿನಾಥ ಜೆ. ವಣ್ಣೂರು, ಪೊಲೀಸ್ ನಿರೀಕ್ಷಕರು, ಕ.ಲೋ ಹಾಸನ ರವರು ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿರುತ್ತಾರೆ. ಹಾಗೂ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಅಭಿಯೋಜಕರಾದ ಪರಶುರಾಮ್ ನ್ಯಾಯಾಲಯದಲ್ಲಿ ವಾದ ಮಂಡಿಸಿರುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...