ಕಳ್ಳತನವಾಗುವುದನ್ನು ತಪ್ಪಿಸಲೆಂದು ತನ್ನ ಡೋರ್ ಬೆಲ್ ನಲ್ಲಿ ಕ್ಯಾಮೆರಾ ಅಳವಡಿಸಿದ್ದ ಬ್ರಿಟನ್‌ನ ವೈದ್ಯರೊಬ್ಬರು, ತಮ್ಮ ಈ ಕ್ರಮದಿಂದಾಗಿ ನ್ಯಾಯಾಂಗ ಸಮರವನ್ನೆದುರಿಸಬೇಕಾಗಿ ಬರಬಹುದು ಎಂದು ಕನಸಿನಲ್ಲೂ ಊಹಿಸಿರಲಿಲ್ಲ.
ಬ್ರಿಟನ್‌ನ ಖಾಸಗಿತನದ ಕಾನೂನಿನ ಉಲ್ಲಂಘನೆ ಮಾಡಿರುವ ಆಪಾದನೆ ಎದುರಿಸುತ್ತಿರುವ ವೈದ್ಯ ಜಾನ್ ವುಡಾರ್ಡ್, ತಮ್ಮ ಮನೆಯ ಡೋರ್‌ಬೆಲ್ ಗೆ ಕ್ಯಾಮೆರಾ ಅಳವಡಿಸಿದ್ದಕ್ಕೆ ತಮ್ಮ ನೆರೆಯ ಮನೆಯವರಿಗೆ ಪರಿಹಾರವಾಗಿ ಒಂದು ಕೋಟಿ ರೂ.ಗಳನ್ನು ಕೊಡಬೇಕಾಗಿ ಬಂದಿದೆ.
ಕೆಲವು ತಿಂಗಳ ಹಿಂದೆ ತಮ್ಮ ಕಾರು ಕಳುವಾದ ಕಾರಣ ಜಾನ್ ವುಡಾರ್ಡ್ ಹೀಗೆ ಕ್ಯಾಮೆರಾ ಅಳವಡಿಸಿದ್ದರು. ಭವಿಷ್ಯದಲ್ಲಿ ಕಳ್ಳತನವಾಗುವುದನ್ನು ತಡೆಗಟ್ಟುವ ಉದ್ದೇಶದಿಂದ ಕ್ಯಾಮೆರಾ ಅಳವಡಿಸಿದ್ದರು ಜಾನ್.
ಪೇಟಿಎಂ ಸಿಇಓಗೆ ಇಮೇಲ್ ಕಳುಹಿಸಿದ ವ್ಯಕ್ತಿ: ಅಷ್ಟಕ್ಕೂ ಅದರಲ್ಲೇನಿತ್ತು ಗೊತ್ತಾ..?
ಆದರೆ ಪಕ್ಕದ ಮನೆಯ ವ್ಯಕ್ತಿಗೆ ಇದರಿಂದ ತನ್ನ ಖಾಸಗಿತನಕ್ಕೆ ಧಕ್ಕೆಯಾದಂತೆ ಅನಿಸಿದ ಕಾರಣ ಆಕೆ ದೂರು ಕೊಟ್ಟಿದ್ದಾರೆ. “ಈ ಡಿವೈಸ್ ನನ್ನ ಮನೆಯ ಮುಂದೆಯೇ ಇರುವ ಕಾರಣ, ನನ್ನ ಖಾಸಗಿತನಕ್ಕೆ ಧಕ್ಕೆಯಾಗಿದ್ದು, ನನ್ನ ಮೇಲೆ 24 ಗಂಟೆಗಳ ಕಾಲ ಕಣ್ಣಿಡಲಾಗಿದೆ ಎನಿಸುತ್ತಿದೆ,” ಎಂದು ಆಪಾದಿಸಿದ ಈಕೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್ ವಿಚಾರಣೆ ಬಳಿಕ ಮಹಿಳೆಯ ಪರವಾಗಿ ಆದೇಶ ಬಂದಿದೆ.
“ಇಡಿಯ ಪ್ರಕರಣದಲ್ಲಿ, ವುಡಾರ್ಡ್ ವಿರುದ್ಧ ಖಾಸಗಿತನದ ಉಲ್ಲಂಘನೆಯ ಪ್ರಕರಣ ದಾಖಲಿಸಲಾಗಿದೆ. ಸ್ಮಾರ್ಟ್ ರಿಂಗ್ ಡೋರ್ ಬೆಲ್ ಅಳವಡಿಸುವ ಮೂಲಕ ಆತ ಪಕ್ಕದ ಮನೆಯವರ ಖಾಸಗಿತನಕ್ಕೆ ಗೌರವ ನೀಡಿಲ್ಲ. ಪಕ್ಕದ ಮನೆಯವರಿಗೆ ಇದಕ್ಕಾಗಿ ಒಂದು ಲಕ್ಷ ಪೌಂಡ್ ಅನ್ನು ಪರಿಹಾರವಾಗಿ ನೀಡಬೇಕೆಂದು ಆದೇಶಿಸುತ್ತೇವೆ,” ಎಂದು ಆಕ್ಸ್‌ಫರ್ಡ್ ಕೌಂಟಿಯ ನ್ಯಾಯಾಧೀಶರು ಆದೇಶಿಸಿದ್ದಾರೆ.
ಟೆನ್ನಿಸ್ ಬಾಲ್ ನಲ್ಲಿ ಗಿನ್ನಿಸ್ ದಾಖಲೆ ಬರೆದ ಶ್ವಾನ
2019ರಲ್ಲಿ ವುಡಾರ್ಡ್‌ರ ಕಾರನ್ನು ಕಳ್ಳರು ಕದ್ದಿದ್ದು, ಈ ಘಟನೆ ಬಳಿಕ ವೈದ್ಯರು ಆಡಿಯೋ ವಿಶುವಲ್ ತಂತ್ರಜ್ಞಾನವಿರುವ ನಾಲ್ಕು ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ ಎಂದು ವರದಿಗಳು ತಿಳಿಸುತ್ತಿವೆ. ಕ್ಯಾಮೆರಾದೊಂದಿಗೆ ಸಣ್ಣದೊಂದು ಮೈಕ್ರೋಫೋನ್ ಸಹ ಅಳವಡಿಸಲಾಗಿದೆ.