ಸ್ಥೂಲಕಾಯದ ಹಿನ್ನೆಲೆಯಲ್ಲಿ ಬ್ರೆಜಿಲಿಯನ್ ರೂಪದರ್ಶಿಯೊಬ್ಬರಿಗೆ ಕತಾರ್ ಏರ್‌ವೇಸ್‌ನಿಂದ ಬೋರ್ಡ್ ಸೀಟ್ ನಿರಾಕರಿಸಿರುವ ಘಟನೆ ನಡೆದಿದೆ.
38 ವರ್ಷದ ಪ್ರಭಾವಿ ಜೂಲಿಯಾನಾ ನೆಹ್ಮೆ ಬೈರುತ್‌ನಿಂದ ದೋಹಾಗೆ ಹೊರಟಿದ್ದು, ತುಂಬಾ ದಪ್ಪವಿರುವ ಕಾರಣಕ್ಕಾಗಿ ತನ್ನನ್ನು ವಿಮಾನ ಹತ್ತಲು ನಿರಾಕರಿಸಲಾಗಿದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದರು.
ಎಕಾನಮಿ ಸೀಟ್‌ಗಾಗಿ ಆಕೆ ಪಾವತಿಸಿದ್ದ 947 ಡಾಲರ್ ಹಣವನ್ನು ಕೂಡ ವಿಮಾನಯಾನ ಸಂಸ್ಥೆ ಮರುಪಾವತಿಸಲು ನಿರಾಕರಿಸಿತ್ತು. ದೊಡ್ಡ ಸೀಟ್‌ಗಳಲ್ಲಿ ಹೊಂದಿಕೊಳ್ಳಲು ಪ್ರಥಮ ದರ್ಜೆ ಟಿಕೆಟ್‌ಗಾಗಿ 3,000 ಡಾಲರ್ ಪಾವತಿಸಲು ಹೇಳಲಾಗಿತ್ತು.
ಇದನ್ನು ಆಕೆ ವಿಡಿಯೋದಲ್ಲಿ ತಿಳಿಸಿದ್ದಳು. ನಾನು ದಪ್ಪಗಿರುವ ಕಾರಣ ಅವರು ನನ್ನನ್ನು ಹತ್ತಲು ಬಿಡುತ್ತಿಲ್ಲ ಎಂದಿದ್ದಳು. ನಂತರ ಆಕೆ ಕೋರ್ಟ್‌ಗೆ ಹೋಗಿದ್ದಳು. ನಾನು ದಪ್ಪವಾಗಿದ್ದೇನೆ, ಆದರೆ ನಾನು ಎಲ್ಲರಂತೆ ಮನುಷ್ಯಳಲ್ಲವೇ ಎಂದು ತಿಳಿಸಿದ್ದರು.
ಘಟನೆಯಿಂದ ಉಂಟಾದ ಒತ್ತಡವನ್ನು ನಿಭಾಯಿಸಲು ಆಕೆಗೆ ಸಹಾಯ ಮಾಡುವಂತೆ ಕತಾರ್ ಏರ್‌ವೇಸ್‌ಗೆ ಕೋರ್ಟ್ ಆದೇಶಿಸಿದೆ. ಆಕೆಗೆ ಉಂಟಾಗಿರುವ ಆಘಾತದಿಂದ ಕೌನ್ಸೆಲಿಂಗ್‌ಗೆ ಹಣ ಪಾವತಿಸಬೇಕೆಂದು ಕೋರ್ಟ್ ಆದೇಶಿಸಿದೆ.