ಕೊಪ್ಪಳ: ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ವಿಜಯ ಸಣ್ಣಗೌಡ್ರ ಮೇಲಿದ್ದ ಪೋಕ್ಸೊ ಕಾಯಿದೆಯಡಿ ದಾಖಲಾಗಿದ್ದ ಆರೋಪ ಸಾಬೀತಾಗಿದ್ದು, ಜಿಲ್ಲಾ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರ (ಪೋಕ್ಸೊ) ನ್ಯಾಯಾಲಯವು ಆರೋಪಿಗೆ ಶಿಕ್ಷೆ ವಿಧಿಸಿ ತಿರ್ಪು ನೀಡಿದೆ.
ಅಪ್ರಾಪ್ತೆ ಸಲುಗೆಯಿಂದ ಇದ್ದ ಆರೋಪಿ ಪ್ರೀತಿಸುವುದಾಗಿ ಹೇಳಿ ಮೈ-ಕೈ ಮುಟ್ಟುತ್ತಿದ್ದ. 2019ರ ಮೇ.25 ರಂದು ರಾತ್ರಿ ಅಪ್ರಾಪ್ತೆ ಟಾಯ್ಲೆಟ್ ಗೆ ಹೋಗುವುದಾಗಿ ತನ್ನ ತಾಯಿ ಬಳಿ ಅಪ್ರಾಪ್ತೆ ಹೊರಗೆ ಬಂದಿದ್ದು, ಆರೋಪಿ ತನ್ನ ಮೋಟರ್ ಸೈಕಲ್ ನಲ್ಲಿ ಕರೆದುಕೋಡು ಹೋಗಿ ಕೊಪ್ಪಳದ ಬೆಂಕಿನಗರದಲ್ಲಿರುವ ತನ್ನ ಆಪ್ತರ ಮನೆಯಲ್ಲಿ ಅಕ್ರಮವಾಗಿ ಬಂದನದಲ್ಲಿಟ್ಟು ಬಾಲಕಿಯ ಮನವೊಲಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಈ ಆರೋಪಗಳೆಲ್ಲವೂ ತನಿಖೆಯಲ್ಲಿ ಸಾಬೀತಾಗಿದ್ದರಿಂದ ಆರೋಪಿಗೆ 4 ವರ್ಷಗಳ ಕಠಿಣ ಶಿಕ್ಷೆ ಹಾಗೂ 15,500 ರೂ.ಗಳ ದಂಡವನ್ನು ಭರಿಸುವಂತೆ ಆದೇಶಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ(ಪೋಕ್ಸೊ) ನ್ಯಾಯಾಧೀಶರಾದ ಶಂಕರ ಎಂ.ಜಾಲವಾದಿ ಅವರು ತೀರ್ಪು ನೀಡಿದ್ದಾರೆ.
ಈ ಪ್ರಕರಣದಲ್ಲಿ ಗಂಗಾವತಿ ಪೋಲಿಸ್ ಉಪಾಧೀಕ್ಷಕರು ಆರೋಪಿತನ ವಿರುದ್ದ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಪ್ರಕರಣ ನಡೆಸಿ ವಾದ ಮಂಡಿಸಿದ್ದರು.