alex Certify ಉದ್ಯೋಗಕ್ಕೆ ಬದಲಾಗಿ ಸೆಕ್ಸ್ ಗೆ ಒತ್ತಾಯ : ಆರೋಪಿಗೆ ಕೋರ್ಟ್ ನಿಂದ ಜಾಮೀನು ಮಂಜೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಕ್ಕೆ ಬದಲಾಗಿ ಸೆಕ್ಸ್ ಗೆ ಒತ್ತಾಯ : ಆರೋಪಿಗೆ ಕೋರ್ಟ್ ನಿಂದ ಜಾಮೀನು ಮಂಜೂರು

ನವದೆಹಲಿ: ಉದ್ಯೋಗಕ್ಕೆ ಬದಲಾಗಿ ಮಹಿಳಾ ಅಭ್ಯರ್ಥಿಗಳಿಂದ ಲೈಂಗಿಕತೆಗೆ ಒತ್ತಾಯಿಸಿದ ಆರೋಪ ಪ್ರಕರಣ ಸಂಬಂಧ ಸಂಜೀವ್ ತಂತುವೆ ಅವರನ್ನು ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲು 7 ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.

ಉದ್ಯೋಗಕ್ಕೆ ಬದಲಾಗಿ ಮಹಿಳಾ ಅಭ್ಯರ್ಥಿಗಳಿಂದ ಲೈಂಗಿಕತೆಗೆ ಒತ್ತಾಯಿಸಿದ ಆರೋಪ ಪ್ರಕರಣ ಸಂಬಂಧ ಆರೋಪಿ ಸಂಜೀವ್ ಕುಮಾರ್ ನನ್ನು ಕ್ರೈಂ ಬ್ರಾಂಚ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಮಧ್ಯಪ್ರದೇಶ ರಾಜ್ಯ ಬೀಜ ಮತ್ತು ಅಭಿವೃದ್ಧಿ ನಿಗಮದಲ್ಲಿ ತಾಂತ್ರಿಕ ಸಿಬ್ಬಂದಿಯ ಹುದ್ದೆಗಳನ್ನು ಭರ್ತಿ ಮಾಡಲು ಗುತ್ತಿಗೆ ನೇಮಕಾತಿಗಾಗಿ ರಾಜಮಾತಾ ವಿಜಯ ರಾಜೇ ಸಿಂಧಿಯಾ ಕೃಷಿ ವಿಶ್ವವಿದ್ಯಾಲಯದ ಪ್ಲೇಸ್ಮೆಂಟ್ ಸೆಲ್‌ ನಲ್ಲಿ ಸಂದರ್ಶನ ನಡೆಯಬೇಕಿತ್ತು. ಇದರಲ್ಲಿ ವಿಶ್ವವಿದ್ಯಾಲಯದ ಉತ್ತೀರ್ಣರಾದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂದರ್ಶನ ಸಮಿತಿಯ ಅಧಿಕಾರಿಗಳು ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ಎಲ್ಲರನ್ನೂ ಸಂದರ್ಶನ ಮಾಡಲಾಗಿದೆ. ಸಂದರ್ಶನದ ನಂತರ, ದೂರುದಾರರು ಕರೆಗಳು ಮತ್ತು ವಾಟ್ಸಾಪ್ ಸಂದೇಶಗಳನ್ನು ಸ್ವೀಕರಿಸಲು ಪ್ರಾರಂಭಿಸಿದರು, ಸಂಜೀವ್ ಕುಮಾರ್ ಟಂಟುವೆ ಎಂಬುವರು ನನಗೆ ಕರೆ ಮಾಡಿ ನಾನು ನಿಮ್ಮನ್ನು ಆಯ್ಕೆ ಮಾಡಬಲ್ಲೆ, ಆದರೆ ಇದಕ್ಕಾಗಿ,  ಲೈಂಗಿಕತೆಗೆ ಒತ್ತಾಯಿಸಿದರು. ಒಂದು ಗಂಟೆಯೊಳಗೆ ಉತ್ತರಿಸುವಂತೆ ಕೇಳಿದಾದ್ದಾರೆ. ಜೊತೆಗೆ ಇತರ ಇಬ್ಬರು ವಿದ್ಯಾರ್ಥಿಗಳಿಂದ ಇದೇ ರೀತಿಯ ಬೇಡಿಕೆಗಳನ್ನು ಇಟ್ಟಿದ್ದರು ಎಂದು ಮಹಿಳೆ ದೂರು ದಾಖಲಿಸಿದ್ದರು.

ವಿದ್ಯಾರ್ಥಿಯ ದೂರಿನ ಮೇರೆಗೆ ಆರೋಪಿ ಸಂಜೀವ್ ತಂತುವೆ ವಿರುದ್ಧ ಐಪಿಸಿ ಸೆಕ್ಷನ್ 354 ಎ, 417, 420, 384, 387 ಐಪಿಸಿ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ತನ್ನನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿ ಹೇಳಿದ್ದಾನೆ. ಪ್ರಕರಣದ ವಾಸ್ತವಾಂಶಗಳನ್ನು ಗಮನದಲ್ಲಿಟ್ಟುಕೊಂಡು ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ನ್ಯಾಯಾಲಯ ನಿರ್ದೇಶಿಸಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...