ಧಾರವಾಡ: ಕೌಟುಂಬಿಕ ಕಲಹ ಮೊದಲಾದ ಕಾರಣದಿಂದ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದ 17 ದಂಪತಿಗಳು ಮತ್ತೆ ಒಂದಾಗಿದ್ದಾರೆ. ಧಾರವಾಡದಲ್ಲಿ ನಡೆದ ಲೋಕ್ ಅದಾಲತ್ ನಲ್ಲಿ 15 ದಂಪತಿಗಳು ಒಂದಾಗಿ ಬಾಳುವುದಾಗಿ ಹೇಳಿದ್ದಾರೆ.
ಮದುವೆಯಾಗಿ ಮಕ್ಕಳಾದವರು ಕೂಡ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಮದುವೆಯಾಗಿ ಕೆಲವು ವರ್ಷಗಳಷ್ಟೇ ಕಳೆದಿದ್ದ ದಂಪತಿ ಕೂಡ ಡೈವೋರ್ಸ್ ಕೊಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇಂತಹ 17 ದಂಪತಿಗಳಿಗೆ ನ್ಯಾಯಾಧೀಶರಾದ ಕೆ. ಶಾಂತಿ ಮತ್ತು ನಾಗಶ್ರೀ ಅವರು ರಾಜಿ ಸಂಧಾನದ ಮೂಲಕ ಒಂದಾಗುವಂತೆ ಮಾಡಿದ್ದಾರೆ.
17 ದಂಪತಿಗಳು ಒಂದಾಗಿ ಬಾಳುವುದಾಗಿ ಹೇಳಿ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ನ್ಯಾಯಾಧೀಶರು ದಾಂಪತ್ಯದ ತಿಳಿವಳಿಕೆ ಹೇಳಿ ರಾಜಿ ಸಂಧಾನದ ಮೂಲಕ ದಂಪತಿಗಳನ್ನು ಒಂದು ಮಾಡಿದ್ದಾರೆ. ಹೀಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ 37 ಜೋಡಿಗಳಲ್ಲಿ 17 ದಂಪತಿಗಳು ಲೋಕ್ ಅದಾಲತ್ ಮೂಲಕ ಮತ್ತೆ ಒಂದಾಗಿದ್ದಾರೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರ ದಂಪತಿ ಮತ್ತು ಅವರ ಕುಟುಂಬದವರನ್ನು ಕರೆಸಿ, ಮೂರ್ನಾಲ್ಕು ಬಾರಿ ಸಮಾಲೋಚನೆ ನಡೆಸಲಾಗಿತ್ತು. ಅವರೆಲ್ಲರೂ ಮತ್ತೆ ಒಂದಾಗಿದ್ದಾರೆ.