ಬೆಳಗಾವಿ: ಜೋಡಿ ಕೊಲೆ ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಿ ಚಿಕ್ಕೋಡಿಯ 7ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಶಿಕ್ಷೆ ಪ್ರಕಟಿಸಿದೆ.
ಬಾಬು ಮುತ್ಯಪ್ಪ ಅಕಳೆ(35), ನಾಗಪ್ಪ ಮುತ್ಯಪ್ಪ ಅಕಳೆ(32), ಭೀಮಪ್ಪ ಮುತ್ಯಪ್ಪ ಅಕಳೆ(31) ಅವರಿಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ.
ಬಸವರಾಜ ಬುರ್ಜಿ(24) ಮತ್ತು ಸಂಗೀತ ಬಾಬು ಅಕಳೆ(21) ಅವರನ್ನು ಈ ಮೂವರು ಕೊಂದಿದ್ದರು. ಬಸವರಾಜ ಮತ್ತು ಸಂಗೀತ ನಡುವೆ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ 2013 ರ ಅಕ್ಟೋಬರ್ 22 ರಂದು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೆಕೆ ಮಮದಾಪುರದಲ್ಲಿ ಕೊಲೆ ಮಾಡಲಾಗಿತ್ತು.