ಪ್ರೇಮ ವಿವಾಹವಿರಲಿ ಅಥವಾ ಮನೆಯವರು ನಿಶ್ಚಯಿಸಿದ ಮದುವೆಯೇ ಇರಲಿ ಸಂಗಾತಿಗಳ ಮಧ್ಯೆ ಪ್ರೀತಿಯಿದ್ದಲ್ಲಿ ಮಾತ್ರ ಸಂಬಂಧಗಳು ಚೆನ್ನಾಗಿರುತ್ತವೆ. ಮದುವೆಯ ನಂತರ ಇಬ್ಬರ ನಡುವಣ ಪ್ರೀತಿ ಇನ್ನಷ್ಟು ಹೆಚ್ಚಾಗಬೇಕೆಂದು ಬಯಸಿದರೆ ಜೊತೆಯಾಗಿ ಕೆಲವು ದೇವಾಲಯಗಳ ದರ್ಶನ ಪಡೆಯಬೇಕು. ಅದರಲ್ಲೂ ಲವ್ ಮಂತ್ ಎಂದೇ ಕರೆಯುವ ಫೆಬ್ರವರಿಯಲ್ಲಿ ಈ ದೇವಸ್ಥಾನಗಳಿಗೆ ತೆರಳುವುದು ಸೂಕ್ತ.
ವೃಂದಾವನದ ಪ್ರೇಮ ಮಂದಿರ
ಈ ದೇವಾಲಯದ ಭವ್ಯತೆಯನ್ನು ಎಲ್ಲರೂ ನೋಡಲೇಬೇಕು. ಈ ದೇವಾಲಯವು ಸೀತಾ ರಾಮ ಮತ್ತು ಶ್ರೀ ಕೃಷ್ಣ ರಾಧೆಗೆ ಸಮರ್ಪಿತವಾಗಿದೆ. ಹಾಗಾಗಿ ಇದು ಪ್ರೀತಿಯ ಸಂಕೇತವಾಗಿದ್ದು, ಸಂಗಾತಿಯೊಂದಿಗೆ ಒಮ್ಮೆ ಇಲ್ಲಿಗೆ ಭೇಟಿ ನೀಡಿ.
ಆಂಧ್ರಪ್ರದೇಶದ ತಿರುಪತಿ ದೇವಸ್ಥಾನ
ಇದು ಪ್ರಪಂಚದ ಪ್ರಸಿದ್ಧ ದೇವಾಲಯಗಳಲ್ಲೊಂದು. ವಿವಾಹಕ್ಕೂ ಮೊದಲು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬೇಕು. ಹೀಗೆ ಮಾಡುವುದರಿಂದ ಸೂಕ್ತ ಸಂಬಂಧದಲ್ಲಿ ಮದುವೆಯಾಗುತ್ತದೆ. ಜೀವಮಾನವಿಡೀ ಪ್ರೀತಿಯ ಕೊರತೆಯಾಗುವುದಿಲ್ಲ.
ಕೇರಳದ ಗುರುವಾಯೂರ್ ದೇವಾಲಯ
ಈ ದೇವಾಲಯವು ಕೇರಳದಲ್ಲಿದೆ. ಗುರುವಾಯೂರ್ ದೇವಾಲಯವು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ. ಅಲ್ಲಿ ವಿಷ್ಣುವಿನ ಬಾಲಕೃಷ್ಣ ಅವತಾರವನ್ನು ಪೂಜಿಸಲಾಗುತ್ತದೆ. ದೇಗುಲದ ದರ್ಶನ ಪಡೆಯುವ ದಂಪತಿಗಳು ದೀರ್ಘಕಾಲ ಸಂತೋಷದ ಜೀವನವನ್ನು ನಡೆಸುತ್ತಾರೆ. ಆದರೆ ನವವಿವಾಹಿತರಿಗೆ ಇಲ್ಲಿ ಪ್ರವೇಶವಿಲ್ಲ.
ಉತ್ತರಾಖಂಡದ ತ್ರಿಯುಗಿ ನಾರಾಯಣ ದೇವಾಲಯ
ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದೇವಾಲಯದಲ್ಲಿ ಪಾರ್ವತಿ ದೇವಿಯು ಶಿವನನ್ನು ವಿವಾಹವಾದಳು. ಈ ಕಾರಣಕ್ಕಾಗಿಯೇ ಮದುವೆಗೂ ಮುನ್ನ ಜೋಡಿಗಳು ಇಲ್ಲಿ ದರ್ಶನ ಪಡೆಯುತ್ತಾರೆ.