alex Certify ಬ್ಯುಸಿ ಲೈಫ್ ನಲ್ಲಿ ‘ಆರೋಗ್ಯಕರ ಲೈಂಗಿಕ ಜೀವನ’ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯುಸಿ ಲೈಫ್ ನಲ್ಲಿ ‘ಆರೋಗ್ಯಕರ ಲೈಂಗಿಕ ಜೀವನ’ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ಆರೋಗ್ಯಕರ ಲೈಂಗಿಕ ಜೀವನವು ನಿಮ್ಮ ಸಂಬಂಧವನ್ನು ದೀರ್ಘಕಾಲದವರೆಗೆ ಉತ್ತಮ ಸ್ಥಿತಿಯಲ್ಲಿಡುತ್ತದೆ. ಏಕೆಂದರೆ ಇದು ದಂಪತಿಯ ನಡುವೆ ಭಾವನಾತ್ಮಕ ಸಂಪರ್ಕವನ್ನು ಹೆಚ್ಚಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ.

ಆದರೆ ಬ್ಯುಸಿ ಲೈಪ್ ನಲ್ಲಿಯೂ ನೀವು ಆರೋಗ್ಯಕರ ಲೈಂಗಿಕ ಜೀವನವನ್ನು ಕಾಪಾಡಿಕೊಳ್ಳುವುದು ಒಂದು ಸಮಸ್ಯೆಯಾಗಿದೆ. ಹಾಗಾಗಿ ಅಂತವರು ಕೆಲಸದ ಒತ್ತಡದ ನಡುವೆಯೂ ಆರೋಗ್ಯಕರ ಲೈಂಗಿಕ ಜೀವನವನ್ನು ಹೊಂದಲು ಈ ಸಲಹೆ ಪಾಲಿಸಿ.

* ನಿಮ್ಮ ಲೈಂಗಿಕ ಜೀವನ ಉತ್ತಮವಾಗಿರಲು ದಂಪತಿ ಸ್ವಲ್ಪ ಸಮಯ ತೆಗೆದುಕೊಂಡು ಲೈಂಗಿಕ ವಿಚಾರಗಳ ಬಗ್ಗೆ ಮಾತುಕತೆ ನಡೆಸಬೇಕು. ನಿಮ್ಮ ಲೈಂಗಿಕ ಬಯಕೆಗಳು ಮತ್ತು ನಿರೀಕ್ಷೆಗಳ ಬಗ್ಗೆ ಮುಕ್ತವಾಗಿ ಪರಸ್ಪರರು ಮಾತನಾಡಬೇಕು. ದಂಪತಿ ಲೈಂಗಿಕತೆಯನ್ನು ಯಾವ ರೀತಿ ಆನಂದಿಸಬಹುದು ಮತ್ತು ಅತೃಪ್ತಿಯ ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚೆ ಮಾಡಬೇಕು.

*ಒತ್ತಡದ ಜೀವನದ ನಡುವೆಯೂ ವಾರಕೊಮ್ಮೆಯಾದರೂ ಡೇಟಿಂಗ್, ಹನಿಮೂನ್ ಗೆ ಹೋಗಿ. ಹನಿಮೂನ್ ಮದುವೆಯಾದ ಹೊಸದರಲ್ಲಿ ಮಾತ್ರ ಹೋಗಬೇಕು ಎಂಬ ನಿಯಮವಿಲ್ಲ. ರಜಾದಿನಗಳಲ್ಲಿ ಉತ್ತಮವಾದ ಪ್ರದೇಶಕ್ಕೆ ಹನಿಮೂನ್ ಗೆ ಹೋಗಿ. ಇದರಿಂದ ನಿಮ್ಮ ಮನಸ್ಸಿಗೆ ಖುಷಿಯಾಗುತ್ತದೆ ಮತ್ತು ಲೈಂಗಿಕತೆಯನ್ನು ಹೆಚ್ಚು ಆನಂದಿಸಬಹುದು.

*ಪ್ರತಿಬಾರಿ ಲೈಂಗಿಕತೆಯಲ್ಲಿ ಒಂದೇ ಭಂಗಿಯನ್ನು ಬಳಸಬೇಡಿ. ಇದು ನಿಮಗೆ ಬೋರ್ ಎನಿಸುತ್ತದೆ. ಹಾಗಾಗಿ ಲೈಂಗಿಕತೆಯಲ್ಲಿ ಹಲವಾರು ಭಂಗಿಗಳಿವೆ. ಅವುಗಳಲ್ಲಿ ನಿಮಗೆ ಮತ್ತು ನಿಮ್ಮ ಸಂಗಾತಿಗೆ ಖುಷಿ ನೀಡುವಂತಹ ಭಂಗಿಗಳಲ್ಲಿ ಲೈಂಗಿಕತೆಯನ್ನು ಹೊಂದಿ.

* ನೀವು ಆರೋಗ್ಯಕರ ಲೈಂಗಿಕ ಜೀವನವನ್ನು ಹೊಂದಲು ನಿಮ್ಮ ದೇಹವು ಆರೋಗ್ಯವಾಗಿರುವುದು ಬಹಳ ಮುಖ್ಯ. ಹಾಗಾಗಿ ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ ಮತ್ತು ಸಾಕಷ್ಟು ನಿದ್ರೆ ಮಾಡಿ. ಇವು ನಿಮ್ಮ ಲೈಂಗಿಕ ಕಾರ್ಯಕ್ಷಮತೆ ಮತ್ತು ಕಾಮಾಸಕ್ತಿಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.

* ಅಲ್ಲದೇ ನಿಮ್ಮ ಲೈಂಗಿಕ ಜೀವನದಲ್ಲಿ ಯಾವುದೇ ಸಮಸ್ಯೆ ಕಂಡುಬಂದರೆ ತಕ್ಷಣ ಲೈಂಗಿಕ ತಜ್ಞರ ಸಹಾಯ ಪಡೆಯಿರಿ.
ಈ ಸಲಹೆಗಳನ್ನು ಪಾಲಿಸುವುದರ ಮೂಲಕ ದಂಪತಿ ಸುಖಕರವಾದ ದಾಂಪತ್ಯವನ್ನು ಹೊಂದಿ. ಅನ್ಯೋನ್ಯವಾಗಿ ಜೀವನ ನಡೆಸುತ್ತಾ ದೀರ್ಘಕಾಲದವರೆಗೆ ನಿಮ್ಮ ಸಂಬಂಧ ಗಟ್ಟಿಯಾಗಿರುವಂತೆ ನೋಡಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...