alex Certify ಕೋವಿಡ್​ ಕೇರ್​ ಸೆಂಟರ್​ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವಜೋಡಿಯಿಂದ ಮಾನವೀಯ ಕಾರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ ಕೇರ್​ ಸೆಂಟರ್​ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವಜೋಡಿಯಿಂದ ಮಾನವೀಯ ಕಾರ್ಯ

ಕೊರೊನಾ ವೈರಸ್​ನಿಂದಾಗಿ ಜನರ ಜೀವನವೇ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ಮದುವೆ ಬಗ್ಗೆ ಏನೇನೋ ಕನಸು ಕಂಡವರು ಮನೆಯಲ್ಲೇ ಮದುವೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ನಿರ್ಬಂಧಗಳ ನಡುವೆಯೂ ಜನರು ಮದುವೆ ಕಾರ್ಯಕ್ರಮದ ವಿಚಾರದಲ್ಲಿ ಡಿಫರೆಂಟ್​ ಆಗಿ ಪ್ಲಾನ್​ ಮಾಡೋದನ್ನ ಮಾತ್ರ ಬಿಟ್ಟಿಲ್ಲ.

ಮಹಾರಾಷ್ಟ್ರದ ಅಹಮದ್​ ನಗರ ಜಿಲ್ಲೆಯಲ್ಲಿ ದಂಪತಿ ಕೋವಿಡ್​ ಕೇರ್​ ಸೆಂಟರ್​ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಮಾತ್ರವಲ್ಲದೇ ಮದುವೆ ಕಾರ್ಯಕ್ರಮಕ್ಕೆಂದು ಮೀಸಲಿಟ್ಟಿದ್ದ ಹಣವನ್ನ ಕೋವಿಡ್​ ಕೇರ್​ ಸೆಂಟರ್​ಗೆ ದೇಣಿಗೆ ರೂಪದಲ್ಲಿ ನೀಡಿದೆ.

ಪಾರ್ನರ್​ ಪಟ್ಟಣದ ಶಾಸಕ ನಿಲೇಶ್​ ಲಂಕಾರ ಶರದ್​ ಚಂದ್ರಜಿ ಪವಾರ್ ಆರೋಗ್ಯ ಮಂದಿರ ಕೋವಿಡ್​ ಸೆಂಟರ್​ನಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಈ ಶುಭ ಸಂದರ್ಭದ ಸವಿನೆನಪಿಗಾಗಿ ಹೊಸ ಜೋಡಿ ಫೇಸ್ ಮಾಸ್ಕ್​, ಸ್ಯಾನಿಟೈಸರ್​, ಪಿಪಿಇ ಕಿಟ್​​, ಅಗತ್ಯ ಔಷಧಿಗಳನ್ನ ಕೋವಿಡ್​ ಕೇಂದ್ರಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಇದರ ಜೊತೆಯಲ್ಲಿ 37 ಸಾವಿರ ರೂಪಾಯಿ ಹಣವನ್ನ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಿ ಎಂದು ಹೇಳಿದ್ದಾರೆ.

ಕೊರೊನಾದಿಂದಾಗಿ ಸಂಪೂರ್ಣ ಜಗತ್ತು ಕಷ್ಟದಲ್ಲಿದೆ. ಮದುವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಕೊರೊನಾ ಭಯದಿಂದಾಗಿ ನಿರ್ಬಂಧಗಳನ್ನ ಹೇರಲಾಗಿದೆ. ನಮ್ಮ ಗ್ರಾಮದ ಅನೇಕರು ಕೋವಿಡ್​ ಕೇಂದ್ರದಲ್ಲಿ ಚಿಕಿತ್ಸೆ ಪಡೀತಾ ಇರೋದು ಗಮನಕ್ಕೆ ಬಂದ ಬಳಿಕ ಅವರಿಗಾಗಿ ಏನಾದರೂ ಮಾಡಬೇಕೆಂದು ನಾವು ನಿರ್ಧರಿಸಿದ್ವಿ. ಹೀಗಾಗಿ ಮದುವೆಯನ್ನ ಈ ರೀತಿಯಲ್ಲಿ ಮಾಡಿಕೊಂಡ್ವಿ ಎಂದು ಅನಿಕೇತ್​​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...