
ಕೆಲ ಪ್ರೇಮಿಗಳು ಪ್ರೀತಿ ವಿಷ್ಯ ಬಂದಾಗ ಜಗತ್ತು ಮರೆಯುತ್ತಾರೆ. ಆದ್ರೆ ಸುತ್ತಮುತ್ತಲಿನವರು ನಮ್ಮನ್ನು ನೋಡ್ತಾರೆ ಎಂಬುದನ್ನು ಮರೆತು ಒಂದಾಗುವುದು ಬೇರೆಯವರಿಗೆ ಮುಜುಗರ ತರಿಸುತ್ತದೆ. ಪಾಕಿಸ್ತಾನದ ವಿಮಾನವೊಂದರಲ್ಲಿ ಇಂತಹದ್ದೇ ಪ್ರಕರಣ ನಡೆದಿದೆ. ವಿಮಾನದಲ್ಲಿದ್ದ ಜೋಡಿ ಎಲ್ಲರ ಮುಂದೆ ಮುತ್ತಿಡಲು ಶುರು ಮಾಡಿದ್ದಾರೆ. ಪ್ರಯಾಣಿಕರು ಕ್ಯಾಬಿನ್ ಸಿಬ್ಬಂದಿಗೆ ದೂರು ನೀಡಿದ್ದಾರೆ.
ಘಟನೆ ಪಾಕಿಸ್ತಾನದ ಏರ್ ಬ್ಲ್ಯೂ ವಿಮಾನದಲ್ಲಿ ನಡೆದಿದೆ. ಕರಾಚಿಯಿಂದ ಇಸ್ಲಾಮಾಬಾದ್‌ಗೆ ತೆರಳುತ್ತಿದ್ದ ಪಿಎ -200 ವಿಮಾನದಲ್ಲಿ ಈ ಘಟನೆ ನಡೆದಿದೆ. ದಂಪತಿ ವಿಮಾನದಲ್ಲಿಯೇ ತುಟಿಗೆ ಮುತ್ತಿಟ್ಟುಕೊಂಡಿದ್ದಾರೆ. ದಂಪತಿ ನೋಡಿದ ಪ್ರಯಾಣಿಕರು ವಿಮಾನ ಸಿಬ್ಬಂದಿಗೆ ದೂರು ನೀಡಿದ್ದಾರೆ. ಸಿಬ್ಬಂದಿ ದಂಪತಿಗೆ ಬುದ್ದಿ ಹೇಳಿದ್ದಾರೆ. ಆದ್ರೆ ಸಿಬ್ಬಂದಿ ಮಾತು ಕೇಳದ ಜೋಡಿ ಮತ್ತೆ ಅಶ್ಲೀಲ ವರ್ತನೆ ಶುರು ಮಾಡಿದ್ದಾರೆ.
ಇದರಿಂದ ಬೇಸತ್ತ ಗಗನಸಖಿ ಜೋಡಿಯನ್ನು ರಗ್ ಸಹಾಯದಿಂದ ಮುಚ್ಚಿದೆ. ಬೇರೆಯವರ ಕಣ್ಣಿಗೆ ಇವರು ಬೀಳದಿರಲಿ ಎನ್ನುವ ಕಾರಣಕ್ಕೆ ಹೀಗೆ ಮಾಡಲಾಗಿದೆ. ಪಾಕಿಸ್ತಾನದ ನಾಗರಿಕ ವಿಮಾನಯಾನ ಇಲಾಖೆ ಈ ಬಗ್ಗೆ ತನಿಖೆ ನಡೆಸುತ್ತಿದೆ. ಅಲ್ಲಿನ ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿ ಹರಿದಾಡ್ತಿದೆ.