ಕೆನಡಾದ ಗ್ರಾಮೀಣ ಪ್ರದೇಶದ ನ್ಯೂಫೌಂಡ್‌ಲೆಂಡ್‌ನಲ್ಲಿ ಘಟಿಸಿದ ವಿಶಿಷ್ಟವಾದ ವಿದ್ಯಮಾನವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಡ್ಯಾನಿಯೆಲೆ ಪೆನ್ನಿ ಹಾಗೂ ಆಕೆಯ ಬಾಯ್‌ಫ್ರೆಂಡ್ ಕರ್ಕ್ ಲೊವೆಲ್ ಎರಡಂತಸ್ತಿನ ತಮ್ಮ ಮನೆಯನ್ನು ಅರ್ಧ ಡಜ಼ನ್ ದೋಣಿಗಳ ನೆರವಿನಿಂದ ಹೊಸ ಜಾಗಕ್ಕೆ ಅಕ್ಟೋಬರ್ 11ರಂದು ಸ್ಥಳಾಂತರಿಸಿದ್ದಾರೆ. ಅವರ ಈ ಟ್ರಿಪ್‌ಗೆ ಎಂಟು ಗಂಟೆಗಳು ಹಿಡಿದಿವೆ.
ಇಲ್ಲಿದೆ ಅನ್ಯಗ್ರಹ ಜೀವಿಗಳಿರುವ ‘ಏರಿಯಾ 51’ರ ಬಗ್ಗೆ ಕುತೂಹಲ ಮಾಹಿತಿ
ಬರೀ ಒಂದು ಕಿಮೀ ದೂರಕ್ಕೆ ಸ್ಥಳಾಂತರ ಮಾಡುವುದು ಈ ಜೋಡಿಗೆ ಭಾರೀ ಹರಸಾಹಸವನ್ನೇ ಮಾಡಬೇಕಾಗಿ ಬಂದಿದೆ. ಅದರಲ್ಲೂ ಒಮ್ಮೆ ದೋಣಿ ಮೇಲಿಂದ ಪಕ್ಕಕ್ಕೆ ಜಾರುವ ಸಾಧ್ಯತೆ ಸೃಷ್ಟಿಯಾಗಿ ಜೋಡಿಗೆ ಜೀವ ಬಾಯಿಗೆ ಬಂದಂತೆ ಆಗಿ, ದೋಣಿಯೊಂದು ಮುರಿದುಹೋಗಿತ್ತು. ಅದೃಷ್ಟವಶಾತ್ ಈ ವೇಳೆ ಮಿಕ್ಕ ದೋಣಿಗಳು ತೂಕವನ್ನು ಹೇಗೋ ಸಂಭಾಳಿಸಿಕೊಂಡಿವೆ.
‘ದೀಪಾವಳಿ’ಯಲ್ಲಿ ಆಕಾಶ ದೀಪ ಹಚ್ಚುವ ಸಂಪ್ರದಾಯ ಏಕಿದೆ….?
ಮನೆಯು ಒಮ್ಮೆ ಹೊಸ ಜಾಗ ತಲುಪುತ್ತಲೇ ಇಬ್ಬರು ಮೆಕ್ಯಾನಿಕಲ್ ಡಿಗ್ಗರ್‌ಗಳು ನೀರಿನ ಬದಿಯಲ್ಲೇ ಕಾಯುತ್ತಾ ಅದನ್ನು ಮೇಲೆತ್ತಿಕೊಂಡು ದಡಕ್ಕೆ ತಂದಿದ್ದಾರೆ.
ಹಳೆಯ ಟೈರ್‌ಗಳ ಮೇಲೆ ಲೋಹದ ಫ್ರೇಂ ಒಂದಕ್ಕೆ ಮನೆಯ ಇಡೀ ರಚನೆಯನ್ನು ಕಟ್ಟಿ, ದೋಣಿಗಳ ಮೇಲೆ ಕೂರಿಸಿ ಮನೆಯನ್ನು ಸಾಗಿಸಲಾಗಿದೆ.
ಇಲ್ಲಿನ ಮ್ಯಾಕ್‌ಲಿವರ್ಸ್‌ನಲ್ಲಿರುವ ಈ ಮನೆಯನ್ನು ಪಶ್ಚಿಮ ಕರಾವಳಿಯಲ್ಲಿರುವ ನ್ಯೂಫೌಂಡ್ಲೆಂಡ್‌ಗೆ ಸ್ಥಳಾಂತರಿಸಲಾಗುತ್ತಿದೆ.