ಲಕ್ನೋ: ಗೋಡೌನ್ ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 4 ತಿಂಗಳ ಮಗು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಟೆಂಟ್ ಗೋಡೌನ್ ನಲ್ಲಿ ಈ ದುರಂತ ಸಂಭವಿಸಿದೆ. ಮೃತರನ್ನು ಫುಡ್ ಡೆಲಿವರಿ ಬಾಯ್ ಪಂಕಜ್ (30), ಪತ್ನಿ ಕವಿತಾ (29) ಹಾಗೂ ಅವರ ಮಗಳು ಕೃತ್ತಿಕಾ ಎಂದು ಗುರುತಿಸಲಾಗಿದೆ.
ಸುನೀಲ್ ದತ್ ಎಂಬುವವರಿಗೆ ಸೇರಿದ ಟೆಂಟ್ ಗೋಡೌನ್ ಇದಾಗಿದ್ದು, ಬೆಂಕಿ ಕೆನ್ನಾಲಿಗೆಗೆ ಮಗು ಸೇರಿ ದಂಪತಿ ಗೋಡೌನ್ ನಲ್ಲಿಯೇ ಸಜೀವದಹನಗೊಂಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದು, ಬೆಂಕಿನಂದಿಸುವಲ್ಲಿ ನಿರತವಾಗಿವೆ.