ಮೈಸೂರು: ಕೃಷ್ಣರಾಜನಗರ ತಾಲೂಕಿನ ಸಂಬರವಳ್ಳಿ ಸಮೀಪ ತೋಟವೊಂದರಲ್ಲಿ ಬಾವಿಗೆ ಹಾರಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಟ್ಟಪ್ಪ(50), ಅವರ ಪತ್ನಿ ರುಕ್ಮಿಣಿ(40) ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. 20 ವರ್ಷದಿಂದ ತೋಟದಲ್ಲಿ ಕೆಲಸ ಮಾಡಿಕೊಂಡು ವಾಸವಾಗಿದ್ದ ದಂಪತಿ ಸಾಲ ಭಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತೋಟದ ಮಾಲೀಕ ಗುಲ್ ಮೊಹಮ್ಮದ್ ಶಾಹಿಲ್ ದೂರು ನೀಡಿದ್ದಾರೆ.