ಅತೀ ಹೆಚ್ಚು ಎತ್ತರದ ಅಂತರ ಹೊಂದಿರುವ ಕಾರಣಕ್ಕೆ ಬ್ರಿಟಿಷ್ ದಂಪತಿ ಗಿನ್ನೆಸ್ ದಾಖಲೆಯ ಪುಸ್ತಕಕ್ಕೆ ಸೇರ್ಪಡೆಯಾಗಿದ್ದಾರೆ. ಜೇಮ್ಸ್ ಹಾಗೂ ಕ್ಲೋ ಲಸ್ಟೆಡ್ ನಡುವೆ ಸರಿ ಸುಮಾರು 2 ಅಡಿ ಅಂತರವಿದೆ.
ಜೇಮ್ಸ್ 3.7 ಅಡಿ ಎತ್ತರವಿದ್ದರೆ ಕ್ಲೋ 5.4 ಅಡಿ ಎತ್ತರ ಇದ್ದಾರೆ. ಜೇಮ್ಸ್ ಅನುವಂಶಿಕ ಸಮಸ್ಯೆಯಿಂದಾಗಿ ಕುಬ್ಜರಾಗಿದ್ದಾರೆ. ತಮ್ಮ ಈ ದೈಹಿಕ ನ್ಯೂನ್ಯತೆಯಿಂದಾಗಿ ಜೀವಮಾನದಲ್ಲೇ ತನಗೆ ವಿವಾಹವಾಗೋದಿಲ್ಲ ಎಂದೇ ಭಾವಿಸಿದ್ದರಂತೆ.
ಜೇಮ್ಸ್ ಕಲಾವಿದರಾಗಿದ್ದರೆ ಇವರ ಪತ್ನಿ ಕ್ಲೋ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದಾರೆ. ಇವರಿಬ್ಬರು ಮದುವೆಯಾಗಿ ಐದು ವರ್ಷ ಕಳೆದಿದೆ. ಈ ದಂಪತಿಗೆ 2 ವರ್ಷದ ಮಗಳೂ ಸಹ ಇದ್ದಾಳೆ.
ಎತ್ತರ ಒಂದು ವಿಚಾರ ಬಿಟ್ಟರೆ ಇವರಿಬ್ಬರ ಪ್ರೀತಿಯಲ್ಲಿ ಯಾವುದೇ ಅಂತರವಿಲ್ಲ. ಜೂನ್ 2ರಂದು ಈ ದಂಪತಿ ವಿಶ್ವ ದಾಖಲೆಯ ಪುಸ್ತಕದಲ್ಲಿ ತಮ್ಮ ಹೆಸರನ್ನ ನೋಂದಾಯಿಸಿದ್ದಾರೆ.
ಕ್ಲೋ ಮೊದಲು ಎತ್ತರವಿರುವ ಯುವಕರನ್ನೇ ಇಷ್ಟ ಪಡುತ್ತಿದ್ದರಂತೆ. ಆದರೆ ಯಾವಾಗ ಅವರು ಜೇಮ್ಸ್ನ್ನು ಭೇಟಿಯಾದ ಬಳಿಕ ಈ ನಿಲುವೇ ಬದಲಾಗಿ ಹೋಗಿದೆಯಂತೆ. ಪ್ರೀತಿ ಒಂದು ನಿಜವಾಗಿದ್ದರೆ ದೇಹದ ನ್ಯೂನ್ಯತೆ ಲೆಕ್ಕಕ್ಕೆ ಬರೋದಿಲ್ಲ ಅನ್ನೋದು ಈ ದಂಪತಿಯ ನಿಲುವಾಗಿದೆ.