ಸುಖ ದಾಂಪತ್ಯ ಜೀವನಕ್ಕೆ ನಂಬಿಕೆ ಬಹಳ ಮುಖ್ಯ. ಇಬ್ಬರ ಮಧ್ಯೆ ಪ್ರಾಮಾಣಿಕತೆಯಿದ್ದಲ್ಲಿ ಮಾತ್ರ ಜೀವನ ಸಂತೋಷದಿಂದ ಕೂಡಿರುತ್ತದೆ. ಇಬ್ಬರಲ್ಲಿ ಒಬ್ಬರು ದಾರಿ ತಪ್ಪಿದ್ರೂ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ. ಸಾಮಾಜಿಕ ಜಾಲತಾಣದಲ್ಲಿ ನೊಂದ ಪತಿಯೊಬ್ಬ ನೋವು ತೋಡಿಕೊಂಡಿದ್ದಾನೆ. ಅವನ ವಯಸ್ಸು 46 ವರ್ಷ. ಅವನ ಪತ್ನಿ ವಯಸ್ಸು 44 ವರ್ಷ. ಕಳೆದ 20 ವರ್ಷಗಳಿಂದ ಇಬ್ಬರು ಸಂಸಾರ ನಡೆಸ್ತಿದ್ದಾರೆ. ಇಬ್ಬರಿಗೆ ಮೂವರು ಮಕ್ಕಳು. ಆದ್ರೆ ಪತ್ನಿ ಮಾತ್ರ ದಾರಿ ತಪ್ಪಿದ್ದಾಳೆ ಎಂಬುದು ಆತನ ಹೇಳಿಕೆ.
ಪತ್ನಿಗೆ ಐಷಾರಾಮಿ ಹುಚ್ಚಂತೆ. ಇಷ್ಟೇ ಆಗಿದ್ರೆ ತಪ್ಪಿರಲಿಲ್ಲ. ಆಕೆ ಪರ ಪುರುಷರ ಜೊತೆ ಸಂಬಂಧ ಬೆಳೆಸುತ್ತಾಳಂತೆ. ಶ್ರೀಮಂತರ ಜೊತೆ ಸಂಬಂಧ ಬೆಳೆಸುವುದು ಆಕೆಗೆ ಇಷ್ಟವಂತೆ. ಈ ಬಗ್ಗೆ ಅನೇಕ ಬಾರಿ ಪತಿ ಪ್ರಶ್ನೆ ಕೇಳಿದ್ದಾನಂತೆ. ಆದ್ರೆ ಇದನ್ನು ಪತ್ನಿ ಅಲ್ಲಗಳೆದಿದ್ದಳಂತೆ. ಒಂದು ದಿನ ಆತನ ಸ್ನೇಹಿತ,ಪತ್ನಿಯನ್ನು ವೃದ್ಧ ಶ್ರೀಮಂತನ ಜೊತೆ ನೋಡಿರುವುದಾಗಿ ಹೇಳಿದ್ದನಂತೆ. ಈ ಬಗ್ಗೆ ಪ್ರಶ್ನೆ ಕೇಳಿದಾಗ ಅದನ್ನು ಆಕೆ ಒಪ್ಪಿಕೊಂಡಿದ್ದಳಂತೆ.
ಆತನ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದಾಗಿ ಹೇಳಿದ್ದ ಪತ್ನಿ, ತಪ್ಪು ತಿದ್ದಿಕೊಳ್ಳುವುದಾಗಿ ಹೇಳಿದ್ದಳಂತೆ. ಅಲ್ಲದೆ ವೈದ್ಯರ ಬಳಿ ಚಿಕಿತ್ಸೆ ಕೂಡ ಪಡೆದಿದ್ದಳಂತೆ. ಆದ್ರೆ ಆಕೆ ಗೂಗಲ್ ನಲ್ಲಿ ಈ ವಿಷ್ಯಗಳನ್ನು ಸರ್ಚ್ ಮಾಡ್ತಿರುತ್ತಾಳೆ. ಆಕೆ ಎಸ್ಕಾರ್ಟ್ ಸೇವೆ ಸರ್ಚ್ ಮಾಡ್ತಾಳೆ. ಈ ಬಗ್ಗೆ ಕೇಳಿದ್ರೆ ಮಾತು ಬದಲಿಸುತ್ತಾಳೆಂದು ಪತಿ ಹೇಳಿದ್ದಾನೆ. ಮಾಜಿ ಗೆಳೆಯನ ಜೊತೆಯೂ ಆಕೆ ಸಂಬಂಧ ಹೊಂದಿದ್ದಾಳೆ. ಆಕೆ ಚಟಕ್ಕೆ ನಾನು ಬೇಸತ್ತಿದ್ದೇನೆ. ಇಬ್ಬರ ಮಧ್ಯೆ ಮೊದಲಿನ ಪ್ರೀತಿಯಿಲ್ಲ. ಮುಂದೇನು ಮಾಡ್ಬೇಕೆಂಬುದು ಗೊತ್ತಾಗ್ತಿಲ್ಲವೆಂದು ನೋವು ಹಂಚಿಕೊಂಡಿದ್ದಾನೆ. ಇದಕ್ಕೆ ಅನೇಕರು ಕಮೆಂಟ್ ಮಾಡಿ, ತಮ್ಮ ಸಲಹೆ ನೀಡಿದ್ದಾರೆ.