ವಿಲಕ್ಷಣ ಘಟನೆಯೊಂದರಲ್ಲಿ ಮಗುವಿಗೆ ವಿಮಾನ ಟಿಕೆಟ್ ಇಲ್ಲದ ಕಾರಣ ದಂಪತಿಗಳು ತಮ್ಮ ಮಗುವನ್ನು ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿರುವ ವಿಮಾನ ನಿಲ್ದಾಣದ ಚೆಕ್-ಇನ್ ಕೌಂಟರ್‌ನಲ್ಲೇ ಬಿಟ್ಟುಹೋಗಿದ್ದ ಘಟನೆ ನಡೆದಿದೆ.
ಅಲ್ಲದೇ ಅವರು ಮಗುವಿಗೆ ಟಿಕೆಟ್ ಪಡೆಯಲು ನಿರಾಕರಿಸಿದ್ದರು. ದಂಪತಿಗಳು ಬೆನ್ ಗುರಿಯನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಲ್ಜಿಯಂನ ಬ್ರಸೆಲ್ಸ್ ಗೆ ರೈನೈರ್ ವಿಮಾನವನ್ನು ಹತ್ತಬೇಕಿತ್ತು. ವಿಮಾನ ನಿಲ್ದಾಣವನ್ನು ತಲುಪಿದಾಗ ಮಗುವಿಗೆ ಕೂಡ ಟಿಕೆಟ್ ಬೇಕು ಎಂದು ಅವರಿಗೆ ತಿಳಿಯಿತು.
ಆದರೆ ಮಗುವಿಗೆ ಟಿಕೆಟ್ ಖರೀದಿಸುವ ಬದಲು ಅಥವಾ ವಿಮಾನ ನಿಲ್ದಾಣದಿಂದ ಹೊರಡುವ ಬದಲು ಅವರು ಪಾಸ್‌ಪೋರ್ಟ್ ನಿಯಂತ್ರಣದೊಂದಿಗೆ ಮಾತುಕತೆ ನಡೆಸಲು ಮಗುವನ್ನು ಕಾರ್ ಸೀಟಿನಲ್ಲಿ ಬಿಟ್ಟು ಹೋಗಿದ್ದರು. ವಿಮಾನ ನಿಲ್ದಾಣದ ಸಿಬ್ಬಂದಿ ತಕ್ಷಣ ಏನಾಯಿತು ಎಂದು ನೋಡಿ ಬೆಚ್ಚಿಬಿದ್ದು ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಇಸ್ರೇಲ್ ಪೋಲೀಸ್ ವಕ್ತಾರರು ಈ ವಿಷಯವನ್ನು ಪರಿಹರಿಸಿದ್ದು ಮಗು ಈಗ ಪೋಷಕರ ಬಳಿ ಇದೆ ಎಂದು ಖಚಿತಪಡಿಸಿದ್ದಾರೆ.