alex Certify ದರೋಡೆಕೋರನನ್ನು ಬೆನ್ನಟ್ಟಿದ್ದೇ ತಪ್ಪಾಗೋಯ್ತು: 22 ತಿಂಗಳ ಸಜೆ ಅನುಭವಿಸಿದ ವ್ಯಕ್ತಿಯ ಗೋಳಿನ ಕಥೆಯಿದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದರೋಡೆಕೋರನನ್ನು ಬೆನ್ನಟ್ಟಿದ್ದೇ ತಪ್ಪಾಗೋಯ್ತು: 22 ತಿಂಗಳ ಸಜೆ ಅನುಭವಿಸಿದ ವ್ಯಕ್ತಿಯ ಗೋಳಿನ ಕಥೆಯಿದು

ಇಬ್ಬರು ದರೋಡೆಕೋರರನ್ನು ಬೆನ್ನಟ್ಟಿದ್ದೇ ಅಪರಾಧವಾಗಿ ವ್ಯಕ್ತಿಯೊಬ್ಬ ಜೈಲಿಗೆ ಹೋದ ಆತಂಕಕಾರಿ ಘಟನೆಯೊಂದು ಇದೀಗ ವೈರಲ್​ ಆಗಿದೆ. ಜೈಲಿಗೆ ಹೋಗಿದ್ದೂ ಅಲ್ಲದೇ, ಕೈಯನ್ನೂ ಮುರಿದುಕೊಂಡು ನರಳುವ ಸ್ಥಿತಿಯೂ ಈ ವ್ಯಕ್ತಿಗೆ ಬಂದಿದೆ.

ಈತನ ಹೆಸರು ಆಡಮ್ ವೈಟ್. ಇಂಗ್ಲೆಂಡ್​ನ ಎಗ್ಗಿಂಟನ್ ನಿವಾಸಿ. ಈತನ ಮನೆಗೆ ಕಳೆದ ವರ್ಷದ ಫೆಬ್ರುವರಿಯಲ್ಲಿ ಇಬ್ಬರು ದರೋಡೆಕೋರರು ನುಗ್ಗಿದ್ದರು. ಟೇಲರ್ ಬೆನ್‌ಫೋರ್ಡ್ ಮತ್ತು ರಿಯಾನ್ ಪಾಲ್ ಎಂಬ ಕಳ್ಳರು ಇವರು. ಆಡಮ್​ ಅವರನ್ನು ಬೆನ್ನಟ್ಟಿ ಹೋಗಿದ್ದ. ಕಾರಿನಲ್ಲಿ ಬೆನ್ನಟ್ಟಿ ಹೋಗಿ ಕಳ್ಳರನ್ನು ಹಿಡಿದುಕೊಡಲು ಪ್ರಯತ್ನಿಸಿದ್ದ.

ಆದರೆ ಆಗಿದ್ದೇ ಬೇರೆ. ವೇಗದಲ್ಲಿ ಕಾರು ಓಡಿಸಿದ್ದರಿಂದ ಕಾರು ನಿಯಂತ್ರಣ ಕಳೆದುಕೊಂಡು ಕಳ್ಳರ ಮೇಲೆ ನುಗ್ಗಿತು. ಇದರಿಂದ ಕಳ್ಳರಿಬ್ಬರೂ ಗಂಭೀರ ಗಾಯಗೊಂಡರು. ಅಪಘಾತ ಮಾಡಿದ್ದಕ್ಕಾಗಿ ಆಡಮ್​ಗೆ 22 ತಿಂಗಳ ಶಿಕ್ಷೆ ವಿಧಿಸಲಾಗಿತ್ತು.

ಇದೀಗ ಆಡಮ್​ ಜೈಲಿನಿಂದ ಹೊರಕ್ಕೆ ಬಂದಿದ್ದಾನೆ. ಆದರೆ ಕೈ-ಕಾಲು ಮೂಳೆ ಮುರಿದಿರುವ ಕಾರಣ ಚಿಕಿತ್ಸೆ ಅವಶ್ಯಕತೆ ಇದೆ. ಜೈಲಿನಲ್ಲಿ ಇದ್ದ ಕಾರಣ ಕೈಯಲ್ಲಿ ಹಣವಿಲ್ಲ. ತನ್ನ ಗೋಳಿನ ಕಥೆಯನ್ನು ಈತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಈತ ತನ್ನ ಕಥೆಯನ್ನು ಜಾಲತಾಣದಲ್ಲಿ ಹೇಳಿದ ಬಳಿಕ ಈತನಿಗಾಗಿ ಹಲವು ಹೃದಯಗಳು ಮಿಡಿದಿವೆ. ಈತನ ಚಿಕಿತ್ಸೆಗೆ ನಿಧಿ ಸಂಗ್ರಹ ಮಾಡಲಾಗಿದ್ದು, ಇಲ್ಲಿಯವರೆಗೆ £170,000 (ಅಂದಾಜು ರೂ. 1.69 ಕೋಟಿ) ಸಂಗ್ರಹವಾಗಿದೆ. ಇದು ತನಗೆ ಅಗತ್ಯವಿದ್ದುದಕ್ಕಿಂತಲೂ ಹೆಚ್ಚಾಗಿದೆ ಎಂದಿರುವ ಆಡಮ್​, ಜನತೆಗೆ ಧನ್ಯವಾದ ಸಲ್ಲಿಸಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...