ತಮ್ಮ ವಿವಾಹ ವಾರ್ಷಿಕೋತ್ಸವ ಸಂಭ್ರಮಾಚರಣೆಗೆಂದು ಉಬರ್ ನಲ್ಲಿ ವಿಹಾರಕ್ಕೆ ಹೋಗಿದ್ದ ದಂಪತಿಗೆ ಉಬರ್ ಸುಮಾರು 24 ಲಕ್ಷ ರೂಪಾಯಿ ದರ ತೋರಿಸಿದ್ದು ದಂಪತಿ ಆಘಾತಕ್ಕೊಳಗಾಗಿದ್ದರು.
ಗ್ವಾಟೆಮಾಲಾಗೆ ಪ್ರವಾಸಕ್ಕೆಂದು ತೆರಳಿದ ಅಮೆರಿಕಾ ಜೋಡಿಗೆ ತಮ್ಮ ಉಬರ್ ಸವಾರಿಗೆ $55 (ಸುಮಾರು ರೂ. 4,500) ದರದ ಬದಲು $29,994 (ಸುಮಾರು ರೂ. 24 ಲಕ್ಷ) ದರ ತೋರಿಸಿತ್ತು. ಕರೆನ್ಸಿ ಕನ್ವರ್ಷನ್ ನಿಂದಾಗಿ ಈ ಪ್ರಮಾದ ನಡೆದಿತ್ತು. ಉಬರ್, ಕೋಸ್ಟಾರಿಕನ್ ಕೊಲೊನ್ ಬದಲಿಗೆ ಅಮೆರಿಕ ಡಾಲರ್‌ಗಳಲ್ಲಿ ಶುಲ್ಕ ವಿಧಿಸಿತು.
ಪತಿ ಡೌಗ್ಲಾಸ್ ಒರ್ಡೊನೆಜ್ ತನ್ನ ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿಸಲು ಮುಂದಾದಾಗ ಖಾತೆಯಲ್ಲಿ ಸಾಕಷ್ಟು ಹಣ ಲಭ್ಯವಿಲ್ಲ ಎಂದು ತಿಳಿದಾಗ ಸಮಸ್ಯೆಯು ಮೊದಲು ಬೆಳಕಿಗೆ ಬಂದಿತು.
ಇದರಿಂದ ತಬ್ಬಿಬ್ಬಾದ ಆತ ತನ್ನ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ 29,000 ಡಾಲರ್ ಶುಲ್ಕ ಕಂಡು ಬೆಚ್ಚಿಬಿದ್ದಿದ್ದಾನೆ. ದಂಪತಿ ತಮ್ಮ ಐದನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಗ್ವಾಟೆಮಾಲಾದಲ್ಲಿದ್ದಾಗ ಜರುಗಿದ ಈ ಅನಿರೀಕ್ಷಿತ ಘಟನೆಯು ಅವರನ್ನು ಹತಾಶೆಗೆ ತಳ್ಳಿತು. ಘಟನೆಗೆ ಪ್ರತಿಕ್ರಿಯೆಯಾಗಿ ಉಬರ್ ತಪ್ಪನ್ನು ಒಪ್ಪಿಕೊಂಡಿದ್ದು, ಹಣ ಮರುಪಾವತಿ ಮಾಡಿದೆ.