ಅಪರಿಚಿತರ ಭ್ರೂಣವನ್ನು ತಮ್ಮ ಗರ್ಭದಲ್ಲಿ ಅಳವಡಿಸಿದ್ದಾರೆ ಎಂದು ಆರೋಪಿಸಿ ದಂಪತಿ ಆಸ್ಪತ್ರೆಯ ಮೇಲೆ ದೂರು ದಾಖಲಿಸಿದ ಘಟನೆಯು ಅಮೆರಿಕದಲ್ಲಿ ನಡೆದಿದೆ.
ಐವಿಎಫ್ ತಂತ್ರಜ್ಞಾನದ ಮೂಲಕ ಮಗುವನ್ನು ಪಡೆದಿದ್ದ ದಫ್ನಾ ಹಾಗೂ ಅಲೆಕ್ಸಾಂಡರ್ ಹೆಣ್ಣು ಮಗುವಿಗೂ ಹಾಗೂ ಕುಟುಂಬದ ಯಾವುದೇ ಸದಸ್ಯರಿಗೂ ಹೋಲಿಕೆಯೇ ಇಲ್ಲದ್ದನ್ನು ಗಮನಿಸಿದ್ದರು. ಇದಾದ ಬಳಿಕ ನಡೆಸಲಾದ ಡಿಎನ್ಎ ಪರೀಕ್ಷೆಯಲ್ಲಿ ಈ ಮಗು ಇವರಿಗೆ ಸಂಬಂಧಿಸಿದ್ದೇ ಅಲ್ಲ. ಬದಲಾಗಿ ಐವಿಎಫ್ ತಂತ್ರಜ್ಞಾನದ ಮೂಲಕ ಮಗುವನ್ನು ಹೊಂದ ಬಯಸಿದ್ದ ಮತ್ತೊಬ್ಬ ದಂಪತಿಗೆ ಸೇರಿದ್ದು ಎಂದು ತಿಳಿದುಬಂದಿದೆ.
ಲಾಸ್ ಏಂಜಲೀಸ್ನ ವಕೀಲರು ಈ ಸಂಬಂಧ ಕೋರ್ಟ್ ಮುಂದೆ ವಾದ ಮಂಡಿಸಿದ್ದು ಒಬ್ಬರೇ ವೈದ್ಯ ಎರಡು ಪ್ರಯೋಗಾಲಯಗಳನ್ನು ನಡೆಸುತ್ತಿದ್ದರು. ಪ್ರಯೋಗಾಲಯದಲ್ಲಿ ನಡೆದ ತಪ್ಪಿನಿಂದಾಗಿ ಇಬ್ಬರು ತಾಯಂದಿರಿಗೆ ಐವಿಎಫ್ ತಂತ್ರಜ್ಞಾನ ಅದಲು ಬದಲಾಗಿದೆ.
ಇಲ್ಲಿದೆ ತೊಂಡೆಕಾಯಿ ಫ್ರೈ ಮಾಡುವ ವಿಧಾನ
ಕೋರ್ಟ್ ಮೂಲಕ ಈ ವಿಚಾರ ಬಗೆಹರಿಸಿಕೊಂಡ ಈ ಇಬ್ಬರು ದಂಪತಿ ತಮ್ಮ ಹೊಟ್ಟೆಯಲ್ಲಿ ಜನಿಸಿದ ಮಗುವನ್ನು ಅದಲುಬದಲು ಮಾಡಿಕೊಂಡಿದ್ದಾರೆ .
ಈ ವಿಚಾರವಾಗಿ ಮಾತನಾಡಿದ ಅಲೆಕ್ಸಾಂಡರ್, ನಮ್ಮ ಮಗು ಜನಿಸಿದ ದಿನವು ನನಗೆ ಅತ್ಯಂತ ಸಂತೋಷದ ದಿನವಾಗಿತ್ತು. ಆದರೆ ಮುಖಚರ್ಯೆ ಸಂಪೂರ್ಣ ಭಿನ್ನವಾಗಿರೋದು ನನ್ನಲ್ಲಿ ಗೊಂದಲವನ್ನು ಸೃಷ್ಟಿಸಿತ್ತು. ಇದೀಗ ಮಗುವನ್ನು ಅದಲು ಬದಲು ಮಾಡಿಕೊಳ್ಳಬೇಕಾದ ಸಂದರ್ಭ ಎದುರಾಗಿದ್ದು ಮನಸ್ಸಿಗೆ ನೋವಾಗಿದೆ ಎಂದು ಹೇಳಿದ್ದಾರೆ.