
ಯಾದಗಿರಿ: ಯಾದಗಿರಿ ತಾಲೂಕಿನ ಮೊಟ್ನಳ್ಳಿ ಗ್ರಾಮದಲ್ಲಿ ಜೊತೆಯಾಗಿ ಜೀವನ ನಡೆಸಿದ ವೃದ್ಧ ದಂಪತಿ ಸಾವಿನಲ್ಲಿಯೂ ಒಂದಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ ಧೂಳಪ್ಪ ಮೃತಪಟ್ಟಿದ್ದಾರೆ. ನಂತರ ಪತಿ ಸಾವಿನಿಂದ ಮನನೊಂದ ಕಾಶಮ್ಮ ಕೂಡ ಪತಿ ಮೃತಪಟ್ಟ ಅರ್ಧ ಗಂಟೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಒಂದೇ ದಿನ ಮನೆಯ ಹಿರಿಯರಿಬ್ಬರು ಮೃತಪಟ್ಟಿದ್ದರಿಂದ ಕಣ್ಣೀರಿಟ್ಟ ಕುಟುಂಬಸ್ಥರು, ಬಂಧು, ಬಾಂಧವರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.