
ಉಡುಪಿ: ಕೋಟ ಸಮೀಪದ ಬನ್ನಾಡಿ ಕಂಬಳಕಟ್ಟು ಬಳಿ ಹಿರಿಯ ದಂಪತಿ ಸಾವಿನಲ್ಲಿಯೂ ಒಂದಾಗಿದ್ದಾರೆ. ಗುರಿಕಾರ ಮನೆ ಕೃಷ್ಣ ಪೂಜಾರಿ(58) ಮತ್ತು ಅವರ ಪತ್ನಿ ಮತ್ತು ಪೂಜಾರ್ತಿ(53) ಮೃತಪಟ್ಟವರು.
ಕಂಬಳ ಕಟ್ಟು ಗುರಿಕಾರ ಮನೆ ಕೃಷ್ಣ ಪೂಜಾರಿ ಬ್ರಹ್ಮ ಬೈದರ್ಕಳ ಕಂಬಳ ಅಭಿಮಾನಿಯಾಗಿದ್ದರು. ಅವರು ಕಂಬಳದ ಸ್ವಯಂಸೇವಕರಾಗಿ, ಕೃಷಿಕರಾಗಿ ಗುರುತಿಸಿಕೊಂಡಿದ್ದರು. ಮುತ್ತು ಪೂಜಾರ್ತಿ ಅವರು ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದರು.
ಬುಧವಾರ ರಾತ್ರಿ ಮುತ್ತು ಪೂಜಾರ್ತಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಅವರ ಅಂತ್ಯಕ್ರಿಯ ಮುಗಿಸಿ ವಾಪಸ್ ಬರುವಾಗ ಹೃದಯಾಘಾತದಿಂದ ಕೃಷ್ಣ ಪೂಜಾರಿ ಮೃತಪಟ್ಟಿದ್ದಾರೆ. ಮೂವರು ಪುತ್ರಿಯರು, ಓರ್ವ ಪುತ್ರ ಅಪಾರ ಬಂಧು ಬಳಗ ಆಗಲಿದ್ದಾರೆ.