ರಾಯಚೂರು: ದಶಕಗಳ ಕಾಲ ಒಟ್ಟಿಗೆ ಜೀವನ ನಡೆಸಿದ ದಂಪತಿ ಸಾವಿನಲ್ಲಿಯೂ ಒಂದಾದ ಘಟನೆ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಮಾಡಗಿರಿ ಗ್ರಾಮದಲ್ಲಿ ನಡೆದಿದೆ.
ವರ್ಷಗಳ ಕಾಲ ಆದರ್ಶಮಯ ಸಂಸಾರ ನಡೆಸಿದ ದಂಪತಿ ವಯೋ ಸಹಜವಾಗಿ ಒಂದೇ ದಿನ ಮೃತಪಟ್ಟಿದ್ದಾರೆ ಅಂತಿಮ ಯಾತ್ರೆಯಲ್ಲಿಯೂ ಜೊತೆಯಾಗಿ ಸಾಗಿದ್ದಾರೆ. ಮಾಡಗಿರಿ ಗ್ರಾಮದ ಮೃತ್ಯುಂಜಯ ಗೌಡ ಮಂದಕಲ್(70) ಪತ್ನಿ ಲಕ್ಷ್ಮಿದೇವಿ(65) ಮೃತಪಟ್ಟ ದಂಪತಿ.
ಅನಾರೋಗ್ಯದಿಂದ ಬಳಲುತ್ತಿದ್ದ ಪತಿಯನ್ನು ಆರೈಕೆ ಮಾಡುತ್ತಿದ್ದ ಲಕ್ಷ್ಮಿದೇವಿ ಸೋಮವಾರ ವಯೋಸಹಜವಾಗಿ ಮೃತಪಟ್ಟಿದ್ದಾರೆ. ಅವರು ಮೃತಪಟ್ಟ ಒಂದೇ ಗಂಟೆಯಲ್ಲಿ ಮೃತ್ಯುಂಜಯ ಗೌಡ ಕೊನೆಯುಸಿರೆಳೆದಿದ್ದಾರೆ.