ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಸಮೀಪದ ಕೆಸಿ ಪಾಳ್ಯದಲ್ಲಿ ದಂಪತಿ ಸಾವಿನಲ್ಲಿಯೂ ಒಂದಾಗಿದ್ದಾರೆ.
ಪತ್ನಿಯ ಅಂತ್ಯಕ್ರಿಯೆ ನೆರವೇರಿಸಿ ಬಂದ ಪತಿ ಕೊನೆಯುಸಿರಲಿದ್ದಾರೆ. ಜಾನಪದ ಕಲಾವಿದರಾದ ಹನುಮಕ್ಕ(70) ಶನಿವಾರ ಸಂಜೆ ಮನೆ ಜಗಲಿ ಮೇಲೆ ಕುಳಿತಿದ್ದಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಬೀರದೇವರ ದೇವಸ್ಥಾನದ ಗೌಡರಾಗಿದ್ದ ಅವರ ಪತಿ ರೇವೇಗೌಡ(85) ಜಮೀನಿನಲ್ಲಿ ಪತ್ನಿಯ ಅಂತ್ಯಕ್ರಿಯೆ ನೆರವೇರಿಸಿ ಬಂದು ಕೊನೆಯುಸಿರೆಳೆದಿದ್ದಾರೆ. ಅವರು ಪುತ್ರ ಹಾಗೂ ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
ಹನುಮಕ್ಕ ಜಾನಪದ ಕಲಾವಿದರಾಗಿದ್ದು, ನಾಮಕರಣ, ಮದುವೆ, ಸೀರೆ, ಶುಭ ಕಾರ್ಯಗಳಲ್ಲಿ ಸೋಬಾನೆ ಪದ ಜಾನಪದ ಗೀತೆ ಹಾಡುತ್ತಿದ್ದರು. ಜಾತ್ರೆ, ಉತ್ಸವ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಅವರು ಹಾಡುತ್ತಿದ್ದರು.