alex Certify ವಿಮಾನದಲ್ಲಿ ನವ ದಂಪತಿ ನೃತ್ಯ: ನೆಟ್ಟಿಗರಿಂದ ಶ್ಲಾಘನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದಲ್ಲಿ ನವ ದಂಪತಿ ನೃತ್ಯ: ನೆಟ್ಟಿಗರಿಂದ ಶ್ಲಾಘನೆ

ಇತ್ತೀಚಿನ ದಿನಗಳಲ್ಲಿ, ಮದುವೆ ಮನೆಗಳಲ್ಲಿ ಸಂಗೀತ, ನೃತ್ಯ ಮಾಮೂಲು. ಅದರಂತೆಯೇ ಜೋಡಿಗಳು ಕಂಡಕಂಡಲ್ಲಿ ನೃತ್ಯ ಮಾಡುವುದು, ರೀಲ್ಸ್​ ಮಾಡುವುದು, ಜನರ ಗಮನ ಸೆಳೆಯಲು ರಸ್ತೆ ಮೇಲೆ ನರ್ತಿಸುವುದು ಸಾಮಾನ್ಯ. ಅಂಥ ಕೆಲ ವಿಡಿಯೋಗಳು ಅವರ ಇಷ್ಟದಂತೆ ವೈರಲ್​ ಆಗುವುದೂ ಇದೆ.

ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ದಂಪತಿಯೊಬ್ಬರು ವಿಮಾನದಲ್ಲಿ ಮಾನ್ ಮೇರಿ ಜಾನ್ ಆನ್‌ಬೋರ್ಡ್ ಹಾಡಿಗೆ ಡಾನ್ಸ್​ ಮಾಡಿದ್ದಾರೆ. ಈ ಡಾನ್ಸ್​ ವಿಡಿಯೋ ವೈರಲ್​ ಆಗಿದೆ.

ಈಗ ವೈರಲ್ ಆಗಿರುವ ವಿಡಿಯೋವನ್ನು ಜೇ ಕರ್ಮಾನಿ ಎಂಬ ಬಳಕೆದಾರರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಶ್ರುತಿಕಾ ಮತ್ತು ಶುಭಂ ಎಂಬ ದಂಪತಿ ವಿಮಾನದಲ್ಲಿ ನೃತ್ಯ ಮಾಡಿದ್ದಾರೆ. ಇವರು ಕೆಲ ದಿನಗಳ ಹಿಂದೆ ಮದುವೆಯಾಗಿದ್ದು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಚಾರ್ಟರ್ ಫ್ಲೈಟ್‌ನಲ್ಲಿ ಈ ಘಟನೆ ನಡೆದಿದೆ.

ಶೀರ್ಷಿಕೆಯ ಪ್ರಕಾರ, ದಂಪತಿಗಳು 36,000 ಅಡಿ ಎತ್ತರದಲ್ಲಿ ನೃತ್ಯ ಮಾಡುತ್ತಿದ್ದರು. ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊ ಸುಮಾರು 4 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ.

https://youtu.be/6lzOAu7LtKQ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...