alex Certify BIG NEWS: ಯುಪಿಐನಲ್ಲಿ ದೇಶದ ಮೊದಲ ಎಫ್ ಡಿ ಸೇವೆ ಪರಿಚಯ; ಇಲ್ಲಿದೆ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಯುಪಿಐನಲ್ಲಿ ದೇಶದ ಮೊದಲ ಎಫ್ ಡಿ ಸೇವೆ ಪರಿಚಯ; ಇಲ್ಲಿದೆ ಡಿಟೇಲ್ಸ್

super.money ಇಂದು ಸೂಪರ್ ಎಫ್ ಡಿಯನ್ನು ಆರಂಭಿಸಿದೆ. ಇದು ಸಂಪೂರ್ಣ ಡಿಜಿಟಲ್ ಉಳಿತಾಯ ಉತ್ಪನ್ನವಾಗಿದ್ದು, ನಿಶ್ಚಿತ ಠೇವಣಿಗೆ ಯುಪಿಐ ಅನ್ನು ಸುಲಭಗೊಳಿಸುವ ಉತ್ಪನ್ನ ಇದಾಗಿದೆ. ಸಂಪೂರ್ಣ ಡಿಜಿಟಲ್ (2 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ), ಸರಳ ಮತ್ತು ಅತ್ಯುತ್ತಮವಾದ ರೀತಿಯಲ್ಲಿ ನಿಶ್ಚಿತ ಠೇವಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದನ್ನು ಪುನರ್ ವ್ಯಾಖ್ಯಾನಪಡಿಸುವ ಉದ್ದೇಶವನ್ನು ಕಂಪನಿ ಹೊಂದಿದೆ. ಸೂಪರ್.ಮನಿಯ ಬಳಕೆದಾರರು ಪ್ರಸ್ತುತ ಆರ್ ಬಿ ಐ ಅನುಮೋದಿಸಿರುವ ಐದು ಬ್ಯಾಂಕುಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಸೂಪರ್.ಮನಿಯ ಎಲ್ಲಾ ಎಫ್ ಡಿಗಳಿಗೆ ಡಿಐಸಿಜಿಸಿಯಿಂದ 5,00,000 ರೂಪಾಯಿವರೆಗೆ ವಿಮೆಯ ಸೌಲಭ್ಯವಿರುತ್ತದೆ.

ಭಾರತದ ಯುವ ಸಮುದಾಯವನ್ನು ಉಳಿತಾಯಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉದ್ಯಮದಲ್ಲಿ ಇದೇ ಮೊದಲ ಬಾರಿಗೆ ಸೂಪರ್ ಎಫ್ ಡಿಯನ್ನು ಪರಿಚಯಿಸಲಾಗಿದೆ. ಈ ಸೂಪರ್ ಎಫ್ ಡಿಯೊಂದಿಗೆ ಬಳಕೆದಾರರು ಕೇವಲ 1000 ರೂಪಾಯಿಯಿಂದ ಎಫ್ ಡಿಯನ್ನು ಬುಕ್ ಮಾಡಬಹುದಾಗಿದೆ ಮತ್ತು ಶೇ.9.5 ರವರೆಗೆ ಬಡ್ಡಿಯನ್ನು ಗಳಿಸಬಹುದಾಗಿದೆ. ಹೊಸ ಪೀಳಿಗೆಯ ಭಾರತೀಯ ಹೂಡಿಕೆದಾರರಿಗೆ ಹೊಂದಿಕೊಳ್ಳುವ ರೀತಿಯಲ್ಲಿ ಈ ಉತ್ಪನ್ನವನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನು ಬಳಕೆದಾರರು ಡಿಜಿಟಲ್ ಮತ್ತು ಹಣಕಾಸು ಸ್ನೇಹಿಯನ್ನಾಗಿ ಬಳಕೆ ಮಾಡಬಹುದಾಗಿದೆ. ಈ ಉತ್ಪನ್ನವು ಬಳಕೆದಾರರಿಗೆ ಉಳಿತಾಯ ಮಾಡಲು ಮತ್ತು ಹೂಡಿಕೆ ಪ್ರಯಾಣವನ್ನು ಆರಂಭಿಸಲು ನೆರವಾಗುತ್ತದೆ.

ಭಾರತ ಸರ್ಕಾರದ ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಜನಸಾಮಾನ್ಯರಲ್ಲಿ ನಿವ್ವಳ ಆರ್ಥಿಕ ಉಳಿತಾಯ ಪ್ರಮಾಣದಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ. 2020-21 ಮತ್ತು 2022-23 ರ ಅವಧಿಯಲ್ಲಿ ಈ ವರ್ಗದ ಉಳಿತಾಯದಲ್ಲಿ 9 ಲಕ್ಷ ಕೋಟಿ ರೂಪಾಯಿಗೂ ಅಧಿಕದಷ್ಟು ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಸಾಲ ಮತ್ತು ಠೇವಣಿ ಬೆಳವಣಿಗೆ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಎದುರಾಗಿರುವ ಸವಾಲುಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಸೂಪರ್ ಎಫ್ ಡಿ ಮುನ್ನೆಜ್ಜೆ ಇಟ್ಟಿದೆ. ಈ ಉತ್ಪನ್ನವು ಹೂಡಿಕೆದಾರರಿಗೆ ಹಣದುಬ್ಬರದಿಂದ ಎದುರಾಗುವ ನಷ್ಟದಿಂದ ರಕ್ಷಣೆ ಮತ್ತು ತಾವು ಹೂಡಿಕೆ ಮಾಡಿದ ಹಣಕ್ಕೆ ಸ್ಥಿರವಾದ ಆದಾಯ ಬರುವುದನ್ನು ಖಾತರಿಪಡಿಸುತ್ತದೆ.

ಸೂಪರ್ ಎಫ್ ಡಿಯೊಂದಿಗೆ ಸೂಪರ್.ಮನಿ ತನ್ನೆಲ್ಲಾ 7 ಮಿಲಿಯನ್ ಬಳಕೆದಾರರಿಗೆ ತನ್ನ ಮೊದಲ ಹೂಡಿಕೆ ಉತ್ಪನ್ನವನ್ನು ಪರಿಚಯಿಸುತ್ತಿದೆ. ಗ್ರಾಹಕರು ಅತ್ಯಂತ ಸುಲಭವಾಗಿ ಇಕೆವೈಸಿಯನ್ನು ಪೂರ್ಣಗೊಳಿಸುವ ಮೂಲಕ ಈ ಉತ್ಪನ್ನವನ್ನು ಪಡೆದುಕೊಳ್ಳಬಹುದಾಗಿದೆ.

ಸೂಪರ್ ಎಫ್ ಡಿಯಲ್ಲಿ ಹೂಡಿಕೆ ಮಾಡಲು 4 ಸರಳ ಹಂತಗಳು:

1. super.money ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.

2. ಎಫ್ ಡಿಗಾಗಿ ನಿಮ್ಮ ಬ್ಯಾಂಕ್ ಅನ್ನು ಆಯ್ಕೆ ಮಾಡಿ.

3. ಇಕೆವೈಸಿಯನ್ನು ಮಾಡಿ,

4. ಠೇವಣಿಯನ್ನು ಸೆಟ್ ಮಾಡಿ, ಮತ್ತು ಕೆಲವು ಪ್ರಕರಣಗಳಲ್ಲಿ ವಿಕೆವೈಸಿ ಆಯ್ಕೆಗಳಲ್ಲಿ ಒಂದಾಗಿರುತ್ತದೆ.

ಯುಪಿಐನಲ್ಲಿ ಹಣಕಾಸು ಆಫರ್ ಗಳನ್ನು ವಿಸ್ತರಣೆ ಮಾಡುವ ತನ್ನ ಬದ್ಧತೆಯ ಭಾಗವಾಗಿ ಸೂಪರ್.ಮನಿ ಸೂಪರ್ ಯುಪಿಐ, ಸೂಪರ್ ಕಾರ್ಡ್ ಮತ್ತು ಇದೀಗ ಸೂಪರ್ ಎಫ್ ಡಿಯನ್ನು ಪರಿಚಯಿಸಿದೆ. ಸೂಪರ್.ಮನಿ ಯುಪಿಐನಲ್ಲಿ ಇನ್ನೂ ಅನೇಕ ನಾವೀನ್ಯತೆಯ ಉತ್ಪನ್ನಗಳನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...