ಪೆಟ್ರೋಲ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಸಾರ್ವಜನಿಕರಿಗೆ ಗುಡ್ ನ್ಯೂಸ್ ಇಲ್ಲಿದೆ. ಬಜಾಜ್ ಆಟೋ ಕಂಪನಿ ದೇಶದ ಮೊದಲ CNG ಬೈಕ್ ಬಿಡುಗಡೆ ಮಾಡಿದ್ದು, ಮೊದಲ ದಿನವೇ 16 ಗ್ರಾಹಕರಿಗೆ ವಿತರಿಸಲಾಗಿದೆ.
CNG ಫ್ರೀಡಂ 125 ಬೈಕ್ ರಿಲೀಸ್ ಆಗಿದ್ದು, ಇದರಲ್ಲಿ CNG ಜೊತೆಗೆ ಪೆಟ್ರೋಲ್ ಟ್ಯಾಂಕ್ ಕೂಡ ಇರಲಿದೆ. ಎರಡು ಕೆಜಿ CNG ಇಂಧನದಲ್ಲಿ 200 ಕಿ.ಮೀ. ಗೂ ಅಧಿಕ ದೂರ ಪ್ರಯಾಣಿಸಬಹುದಾಗಿದ್ದು, ಒಂದೊಮ್ಮೆ ಇದು ಖಾಲಿಯಾದರೆ 2 ಲೀಟರ್ ಪೆಟ್ರೋಲ್ ನಿಂದ 130 ಕಿಲೋಮೀಟರ್ ಕ್ರಮಿಸಬಹುದಾಗಿದೆ.
CNG ಬೈಕ್ ಬಳಕೆಯಿಂದ ವಾಯು ಮಾಲಿನ್ಯ ಪ್ರಮಾಣ ತಗ್ಗುವುದರ ಜೊತೆಗೆ ಪೆಟ್ರೋಲ್ ಬಳಸುವ ದ್ವಿಚಕ್ರ ವಾಹನಗಳಿಗೆ ಹೋಲಿಸಿದರೆ CNG ಬಳಕೆಯಿಂದ ಶೇಕಡ 50ರಷ್ಟು ಇಂಧನ ವೆಚ್ಚ ಕಡಿಮೆಯಾಗಲಿದೆ. ಈ ಬೈಕ್ ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಬರುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ.