ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಪಸರಿಸುತ್ತಿರುವ ಧರ್ಮ ಇಸ್ಲಾಂ. ಇಸ್ಲಾಂ ಧರ್ಮವನ್ನು ಆಧರಿಸಿದ ಅನೇಕ ದೇಶಗಳಿವೆ. ಪ್ರಪಂಚದಲ್ಲಿ ಸುಮಾರು 1.8 ಶತಕೋಟಿ ಮುಸ್ಲಿಂ ಜನಸಂಖ್ಯೆಯಿದೆ. ಇದು ಇಡೀ ವಿಶ್ವದ ಜನಸಂಖ್ಯೆಯ ಸುಮಾರು 24 ಪ್ರತಿಶತದಷ್ಟಿದೆ. ಇದು ವಿಶ್ವದ ಎರಡನೇ ಅತಿದೊಡ್ಡ ಧರ್ಮವಾಗಿದೆ. ಭಾರತದಲ್ಲಿ 2011ರ ಜನಗಣತಿಯ ಪ್ರಕಾರ 17 ಕೋಟಿ ಮುಸ್ಲಿಮರಿದ್ದಾರೆ.
ಪಾಕಿಸ್ತಾನ, ಇಂಡೋನೇಷ್ಯಾ ಮತ್ತು ಅಫ್ಘಾನಿಸ್ತಾನದಂತಹ ಅನೇಕ ದೇಶಗಳಲ್ಲಿ ಮುಸ್ಲಿಂ ಜನಸಂಖ್ಯೆಯು ತುಂಬಾ ಹೆಚ್ಚಾಗಿದೆ. ಆದರೆ ಜಗತ್ತಿನಲ್ಲಿ ಒಬ್ಬರೇ ಒಬ್ಬ ಮುಸಲ್ಮಾನ್ ವ್ಯಕ್ತಿಯೂ ವಾಸಿಸದ ಹಲವಾರು ದೇಶಗಳಿವೆ.
ವ್ಯಾಟಿಕನ್ ಸಿಟಿ ಯಾವುದೇ ಮುಸ್ಲಿಂ ವ್ಯಕ್ತಿ ವಾಸಿಸದ ದೇಶ. ಇಲ್ಲಿ ಜನಸಂಖ್ಯೆ ಕೇವಲ 800 ಮತ್ತು ಇಲ್ಲಿ ವಾಸಿಸುವ ಎಲ್ಲಾ ಜನರು ಕ್ರಿಶ್ಚಿಯನ್ನರು. ವ್ಯಾಟಿಕನ್ ನಗರವು ಕ್ರಿಶ್ಚಿಯನ್ ಧರ್ಮೀಯರಿಗೆ ಪವಿತ್ರ ಸ್ಥಳವಾಗಿದೆ. ಕ್ರಿಶ್ಚಿಯನ್ ಧರ್ಮದ ಸರ್ವೋಚ್ಚ ಧಾರ್ಮಿಕ ನಾಯಕ ಪೋಪ್ ಇಲ್ಲಿ ವಾಸಿಸುತ್ತಿದ್ದಾರೆ.
ಸೊಲೊಮನ್ ದ್ವೀಪಗಳು, ಮೊನಾಕೊ, ನಿಯು, ಫಾಕ್‌ಲ್ಯಾಂಡ್ ದ್ವೀಪಗಳು, ಟೊಕೆಲಾವ್, ಕುಕ್ ದ್ವೀಪಗಳು, ಗ್ರೀನ್‌ಲ್ಯಾಂಡ್‌ನಂತಹ ದೇಶಗಳು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿಲ್ಲ.
ಕೆಲವು ದೇಶಗಳಲ್ಲಿ ಮುಸಲ್ಮಾನರಿದ್ದರೂ ಮಸೀದಿಗಳಿಲ್ಲ. ಸ್ಲೋವಾಕಿಯಾ ಮತ್ತು ಎಸ್ಟೋನಿಯಾದಲ್ಲಿ ಇದೇ ಸ್ಥಿತಿಯಿದೆ. 5 ಸಾವಿರ ಮುಸ್ಲಿಮರು ಸ್ಲೋವಾಕಿಯಾದಲ್ಲಿ ವಾಸಿಸುತ್ತಿದ್ದರೆ 1500 ಮಂದಿ ಎಸ್ಟೋನಿಯಾದಲ್ಲಿ ವಾಸಿಸುತ್ತಿದ್ದಾರೆ.
ಸ್ಲೋವಾಕಿಯಾದಲ್ಲಿ ಮಸೀದಿಗಳನ್ನು ನಿರ್ಮಿಸಲು ಬೇಡಿಕೆ ಇತ್ತು, ಆದರೆ ಸರ್ಕಾರ ಅದನ್ನು ತಿರಸ್ಕರಿಸಿತು. ಹಲವು ದೇಶಗಳಲ್ಲಿ ಮುಸ್ಲಿಮರಿಗೆ ನಮಾಜ್ ಮಾಡಲು ಅಪಾರ್ಟ್ ಮೆಂಟ್ ನಿರ್ಮಿಸಲಾಗಿದೆ. ಈ ಎರಡೂ ದೇಶಗಳಲ್ಲಿ ಇಸ್ಲಾಂ ಅಧಿಕೃತ ಧರ್ಮದ ಸ್ಥಾನಮಾನವನ್ನು ಹೊಂದಿಲ್ಲ.