ಅಯೋಧ್ಯೆಯಲ್ಲಿ ನಿರ್ಮಿಸಲಾದ ಭವ್ಯವಾದ ಶ್ರೀ ರಾಮ ದೇವಾಲಯದಲ್ಲಿ ರಾಮಲಲ್ಲಾ ಅವರ ಹೊಸ ವಿಗ್ರಹವನ್ನು ಸ್ಥಾಪಿಸಲಾಗಿದೆ. ದೇವಾಲಯದ ಆವರಣ ಮತ್ತು ಗರ್ಭಗುಡಿಯಲ್ಲಿ ಮಂತ್ರಗಳನ್ನು ಪಠಿಸುವ ಮೂಲಕ ಪ್ರಾರ್ಥನೆಗಳನ್ನು ನಡೆಸಲಾಗುತ್ತಿದೆ.
ಶುಕ್ರವಾರ, ರಾಮಲಲ್ಲಾ ಅವರ ಹೊಸ ವಿಗ್ರಹವು ಪೂರ್ಣ ಅಲಂಕಾರದೊಂದಿಗೆ ಹೊರಬಂದಿದೆ. ಇದರ ನಡುವೆ ಜನವರಿ 19 ರ ದಿನಾಂಕವನ್ನು ಇತಿಹಾಸದಲ್ಲಿ ಪ್ರಮುಖ ಬದಲಾವಣೆ ಎಂದು ದಾಖಲಿಸಲಾಗಿದೆ.
ಸುಮಾರು 500 ವರ್ಷಗಳ ನಂತರ, ರಾಮಲಲ್ಲಾ ತನ್ನ ಭವ್ಯ ದೇವಾಲಯಕ್ಕೆ ಮರಳುತ್ತಿದ್ದಾನೆ. ಜನವರಿ 22ರಂದು ರಾಮ ಮಂದಿರ ಉದ್ಘಾಟನೆಯಾಗಲಿದೆ. ಆ ದಿನ, ಇಡೀ ನಗರದಲ್ಲಿ ಹೂವಿನ ತುಂತುರು ಮಳೆ ಸುರಿಸಲು ಪ್ಲ್ಯಾನ್ ಮಾಡಲಾಗಿದೆಯಂತೆ.
ಹೌದು, ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ದಿನ ಇಡೀ ನಗರದಲ್ಲಿ ಹೂವಿನ ತುಂತುರು ಮಳೆ ಸುರಿಸಲು ಕೂಡ ಸಿದ್ದತೆ ನಡೆಸಲಾಗಿದೆ ಎಂದು ಹೇಳಲಾಗಿದೆ. ರಾಮಲಲ್ಲಾನ ಪ್ರತಿಷ್ಟಾಪನೆ ಕಾರ್ಯಕ್ರಮಕ್ಕೆ ವಿವಿಧ ಬಗೆಯ ಹೂವುಗಳನ್ನು ಬಳಸಲಾಗಿದೆ.
ದೇವಾಲಯದ ಉದ್ಘಾಟನೆಯ ನಂತರ, ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಸಹ ಹೊರಡಿಸಲಾಗುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯಲ್ಲಿ ನಿರ್ಮಿಸಲಾದ ಶ್ರೀ ರಾಮ ದೇವಾಲಯದ ಉದ್ಘಾಟನೆಯ ಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದಾರೆ. ಸಿಎಂ ಯೋಗಿ ಶುಕ್ರವಾರ ಅಯೋಧ್ಯೆಯ ಹನುಮಾನ್ ಗರ್ಹಿಗೆ ಕೂಡ ಭೇಟಿ ನೀಡಿದ್ದಾರೆ.