ಅಯೋಧ್ಯೆ : ರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ನಟ ಅಮಿತಾಬ್ ಬಚ್ಚನ್, ಅನಿಲ್ ಅಂಬಾನಿ ಸೇರಿ ಹಲವು ಗಣ್ಯರು ಆಗಮಿಸಿದ್ದಾರೆ.
ನಟ ಅಮಿತಾಬ್ ಬಚ್ಚನ್ ಹಾಗೂ ಪುತ್ರ , ರಿಷಬ್ ಶೆಟ್ಟಿ ದಂಪತಿಗಳು, ನಟರಾದ ಮಾಧುರಿ ದೀಕ್ಷಿತ್ ನಾನೆ, ವಿಕ್ಕಿ ಕೌಶಲ್, ಕತ್ರಿನಾ ಕೈಫ್, ಆಯುಷ್ಮಾನ್ ಖುರಾನಾ, ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ಚಲನಚಿತ್ರ ನಿರ್ಮಾಪಕರಾದ ರಾಜ್ ಕುಮಾರ್ ಹಿರಾನಿ, ಮಹಾವೀರ್ ಜೈನ್ ಮತ್ತು ರೋಹಿತ್ ಶೆಟ್ಟಿ ಮತ್ತಿತರರು ಆಗಮಿಸಿದ್ದಾರೆ.
ಅದೇ ರೀತಿ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಲು ಉದ್ಯಮಿ ಅನಿಲ್ ಅಂಬಾನಿ ಕೂಡ ಅಯೋಧ್ಯೆಯ ಶ್ರೀ ರಾಮ್ ಜನ್ಮಭೂಮಿ ದೇವಸ್ಥಾನಕ್ಕೆ ಆಗಮಿಸಿದ್ದಾರೆ.ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಉತ್ತರ ಪ್ರದೇಶದ ಅಯೋಧ್ಯೆಗೆ ಆಗಮಿಸಿದ್ದಾರೆ.
“ಇಂದು ಅಯೋಧ್ಯೆಯಲ್ಲಿ ನಡೆಯಲಿರುವ ಘಟನೆ ಐತಿಹಾಸಿಕವಾಗಿದೆ… ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ.