ಒಂದು ಕಪ್ ಚಹಾಗೆ ನೀವು ಎಷ್ಟು ದುಡ್ಡು ಕೊಡಲು ಸಿದ್ಧವಿದ್ದೀರಿ? ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ನೀಲೌಫರ್ ಕೆಫೆಯು ಒಂದು ಕಪ್‌ಗೆ 1,000ರೂ ಮೌಲ್ಯದ ಚಹಾವೊಂದನ್ನು ಪರಿಚಯಿಸಿದ್ದು, ಇಷ್ಟು ದುಡ್ಡು ಖರ್ಚು ಮಾಡಿದ್ದಕ್ಕೆ ತಕ್ಕಂತೆ ಚಹಾ ಇರಲಿದೆ ಎಂದು ಕೆಫೆ ತಿಳಿಸಿದೆ.
ಪ್ರತಿ ಕಿಲೋಗೆ 75,000 ರೂ. ಮೌಲ್ಯದ ಎಲೆಗಳಿಂದ ಈ ಚಹಾ ತಯಾರಿಸಲಾಗುತ್ತದೆ.
“ಗೋಲ್ಡನ್ ಟಿಪ್ಸ್ ಬ್ಲಾಕ್ ಟೀ ಹೆಸರಿನ ಈ ವಿಧದ ಚಹಾವನ್ನು ನಾವು ಅಸ್ಸಾಂನ ಮಾಯ್ಜಾನ್‌ನಲ್ಲಿ ಹರಾಜಿನಲ್ಲಿ ಖರೀದಿಸಿದ್ದೇವೆ. ಕೇವಲ 1.5 ಕೆಜಿಯಷ್ಟು ಪುಡಿ ಮಾತ್ರ ಲಭ್ಯವಿದ್ದು, ನಾವು ಅದೆಲ್ಲವನ್ನೂ ಖರೀದಿ ಮಾಡಿದ್ದೇವೆ. ನಮ್ಮ ಗ್ರಾಹಕರಿಗೆ ಈ ಚಹಾದ ವಿಶಿಷ್ಟವಾದ ರುಚಿ ಪರಿಚಯಿಸಲು ನಾವು ಇಚ್ಛಿಸುತ್ತೇವೆ,” ಎಂದು ಕೆಫೆಯ ವ್ಯವಸ್ಥಾಪಕ ನಿರ್ದೇಶಕ ಶಶಾಂಕ್ ಅನುಮುಲಾ ತಿಳಿಸಿದ್ದಾರೆ.
ಈ ಕಾರಣಕ್ಕೆ ಹುಡುಗ್ರು ನೋಡ್ತಾರೆ ಹುಡುಗಿಯರ ತುಟಿ
ಈ ಚಹಾವನ್ನು ಹಾಲಿನೊಂದಿಗೆ ಸರ್ವ್ ಮಾಡುವುದಿಲ್ಲ ಎಂದ ಶಶಾಂಕ್, ಈ ಚಹಾದೊಂದಿಗೆ ತಾವು ತಯಾರಿಸುವ ಒಸ್ಮಾನಿಯಾ, ಬೆಣ್ಣೆ ಬಾದಾಮಿ ಅಥವಾ ಒಣಹಣ್ಣುಗಳ ಕುಕೀಗಳು ಒಳ್ಳೇ ಜೊತೆಯಾಗುತ್ತವೆ ಎಂದಿದ್ದಾರೆ.
ತನ್ನ ಮಾಲ್ಟೀ ಅರೋಮಾದಿಂದ ಖ್ಯಾತವಾಗಿರುವ ಅಸ್ಸಾಂನ ಮಾಯ್ಜಾನ್ ಗೋಲ್ಡನ್ ಟಿಪ್ಸ್, ದೇಶದಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಚಹಾಗಳಲ್ಲಿ ಒಂದಾಗಿದೆ. 2019ರಲ್ಲಿ, ಗೌಹಾಟಿಯ ಚಹಾ ಹರಾಜು ಕೇಂದ್ರವೊಂದರಲ್ಲಿ ಪ್ರತಿ ಕೊಲೋಗೆ 70,000ರೂ.ನಂತೆ ಮಾರಾಟವಾಗಿದ್ದ ಈ ಚಹಾ ದಾಖಲೆ ನಿರ್ಮಿಸಿತ್ತು.